ಅಮೆರಿಕಾದ ಟೆಕ್ಸಾಸ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಿನ ಇತಿಹಾಸದಲ್ಲಿಯೇ ಇದು ಅತ್ಯಂತ ಪ್ರಬಲ ಭೂಕಂಪ ಎಂದು ಹೇಳಲಾಗಿದೆ.
ಅಲ್ಲಿನ ಕಾಲಮಾನ ಶುಕ್ರವಾರ ಸಂಜೆ 5-40 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದ್ದು, ಸಾವು – ನೋವು ಸಂಭವಿಸಿರುವ ಕುರಿತು ವಿವರ ಲಭ್ಯವಾಗಿಲ್ಲ.