alex Certify ಚಳಿಗಾಲದಲ್ಲಿ ತೂಕ ಹೆಚ್ಚಾಗ್ತಿದೆಯಾ ? ಟೆನ್ಷನ್‌ ಬೇಡ, ಇಲ್ಲಿದೆ ಸುಲಭದ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ತೂಕ ಹೆಚ್ಚಾಗ್ತಿದೆಯಾ ? ಟೆನ್ಷನ್‌ ಬೇಡ, ಇಲ್ಲಿದೆ ಸುಲಭದ ಟಿಪ್ಸ್‌

ಚಳಿಗಾಲದಲ್ಲಿ ತೂಕ ಹೆಚ್ಚಾಗೋದು ಕಾಮನ್.‌ ಅಲ್ಪ ಸ್ವಲ್ಪ ತೂಕ ಏರಿಕೆಯಾದ್ರೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ತೂಕದಲ್ಲಿ ವಿಪರೀತ ಹೆಚ್ಚಳ ಕಂಡುಬಂದರೆ ನೀವು ಎಚ್ಚೆತ್ತುಕೊಳ್ಳಬೇಕು. ಇದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ತೊಂದರೆಯಾಗುತ್ತದೆ.

ಚಳಿಗಾಲದಲ್ಲಿ ಹೆಚ್ಚಿನ ಕ್ಯಾಲೋರಿಗಳ ಸೇವನೆ, ದೈಹಿಕ ಚಟುವಟಿಕೆಯಲ್ಲಿ ಬದಲಾವಣೆ ಮತ್ತು ಸೋಮಾರಿತನವು ತೂಕವನ್ನು ಹೆಚ್ಚಿಸುತ್ತದೆ. ಅದನ್ನು ಹೇಗೆ ನಿಯಂತ್ರಿಸಬಹುದು ಅನ್ನೋದನ್ನು ನೋಡೋಣ.

ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜನರು ಅನೇಕ ರುಚಿಕರವಾದ ತಿನಿಸುಗಳನ್ನು, ಕರಿದ ತಿಂಡಿಗಳನ್ನು ತಿನ್ನುತ್ತಾರೆ. ಹೆಸರು ಬೇಳೆ ಹಲ್ವಾ, ಕ್ಯಾರೆಟ್‌ ಹಲ್ವಾದಂತ ಕ್ಯಾಲೋರಿ ಭರಿತ ಸಿಹಿ ತಿನಿಸುಗಳನ್ನು ಸವಿಯುತ್ತಾರೆ. ಇವನ್ನೆಲ್ಲ ತಿನ್ನುವ ಆಸೆಯಾಗುವುದು ಸಹಜ, ಆದರೆ ಮಿತವಾಗಿ ಸೇವನೆ ಮಾಡಿದ್ರೆ ತೂಕದಲ್ಲಿ ವ್ಯತ್ಯಾಸವಾಗುವುದಿಲ್ಲ.

ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಫೈಬರ್ ಮತ್ತು ವಿಟಮಿನ್ ಭರಿತ ವಸ್ತುಗಳನ್ನು ಸೇರಿಸಿ. ಮೀನು, ಮೊಟ್ಟೆ, ಹಣ್ಣುಗಳು, ಬೀನ್ಸ್ ಮತ್ತು ಕಾಲೋಚಿತ ತರಕಾರಿಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮನ್ನು ದೀರ್ಘಕಾಲದವರೆಗೆ ನಿಮ್ಮಲ್ಲಿ ಶಕ್ತಿ ತುಂಬುತ್ತದೆ.

ಬೇಸಿಗೆಯಿರಲಿ, ಚಳಿಗಾಲವಿರಲಿ ಆರೋಗ್ಯಕರ ದೇಹಕ್ಕೆ ವ್ಯಾಯಾಮ ಬಹಳ ಮುಖ್ಯ. ನೀವು ಸಕ್ರಿಯವಾಗಿಲ್ಲದಿದ್ದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ತೂಕವನ್ನು ನಿಯಂತ್ರಿಸಲು ಜಿಮ್‌ಗೆ ಹೋಗುವ ಅಗತ್ಯವಿಲ್ಲ, ನೀವು ಮನೆಯಲ್ಲಿಯೂ ವ್ಯಾಯಾಮ ಮಾಡಬಹುದು.

ಚಳಿಗಾಲದಲ್ಲಿ ಬಗೆಬಗೆಯ ಸ್ನಾಕ್‌ ತಿನ್ನುವ ಕಡುಬಯಕೆ ಕಾಡಬಹುದು. ಅಪರೂಪಕ್ಕೊಮ್ಮೆ ಹೊರಗಡೆ ಊಟ ಮಾಡಿದರೂ ಪರವಾಗಿಲ್ಲ. ಆದರೆ ನೀವು ಇದನ್ನು ಪ್ರತಿದಿನ ತಿಂದರೆ ತೂಕ ಏರುವುದು ನಿಶ್ಚಿತ.

ತೂಕ ನಿಯಂತ್ರಣದಲ್ಲಿಡಲು ಹೋಟೆಲ್‌, ರೆಸ್ಟೋರೆಂಟ್‌ ಸೇರಿದಂತೆ ಹೊರಗೆ ತಿನ್ನುವುದನ್ನು ನಿಲ್ಲಿಸಬೇಕು. ಏನನ್ನಾದರೂ ತಿನ್ನಲು ಬಯಸಿದರೂ ಅದು ಆರೋಗ್ಯಕರವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ಚಳಿಗಾಲದಲ್ಲಿಯೂ ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಬಾಯಾರಿಕೆಯಿಂದ ನಾವು, ನೀರು, ಜ್ಯೂಸ್‌ ಇವನ್ನೆಲ್ಲ ಕುಡಿಯುತ್ತೇವೆ. ಆದರೆ ಚಳಿಗಾಲದಲ್ಲಿ ಬಾಯಾರಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ನಾವು ಹೆಚ್ಚು ನೀರು ಕುಡಿಯುವುದಿಲ್ಲ. ಇದರಿಂದಲೂ ತೂಕ ಹೆಚ್ಚಾಗಬಹುದು. ಹಾಗಾಗಿ ಚಳಿಗಾಲದಲ್ಲೂ ಚೆನ್ನಾಗಿ ನೀರು ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...