ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಂಡ್ರೆ ತಲೆನೋವು ಶುರುವಾಗುತ್ತದೆ. ಕೆಲವರ ಮುಖ, ಕೈ, ಮೈ, ಕುತ್ತಿಗೆ ಭಾಗಗಳಲ್ಲಿ ಇದ್ದಕ್ಕಿದ್ದ ಹಾಗೆ ಚಿಮಕಲು ಮಚ್ಚೆಗಳು ಏಳಲು ಶುರುವಾಗುತ್ತವೆ. ಈ ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ.
ವಿಟಮಿನ್ ಇ : ಚಿಮಕಲು ಮಚ್ಚೆ ತೆಗೆದು ಹಾಕಲು ವಿಟಮಿನ್ ಇ ಸಹಾಯಕಾರಿ. ವಿಟಮಿನ್ ಇ ತೈಲಕ್ಕೆ ಶುಂಠಿ ಬೆರೆಸಿ ಚಿಮಕಲು ಮಚ್ಚೆ ಮೇಲೆ ಮಸಾಜ್ ಮಾಡಿ. ಒಂದೆರಡು ವಾರದಲ್ಲಿಯೇ ಇದ್ರ ಫಲಿತಾಂಶವನ್ನು ನೀವು ಕಾಣಬಹುದು.
ಒಣಗಿದ ಅಂಜೂರ : ದಿನಕ್ಕೆ ನಾಲ್ಕು ಬಾರಿ ಒಣಗಿದ ಅಂಜೂರದ ರಸವನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ.
ಮೆಂತ್ಯೆ : ಒಣಗಿನ ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ಇದು ಚಿಮಕಲು ಮಚ್ಚೆ ಕಡಿಮೆ ಮಾಡುವ ಜೊತೆಗೆ ಆರೋಗ್ಯ ವೃದ್ಧಿ ಮಾಡುತ್ತದೆ.
ಆ್ಯಪಲ್ ವಿನೆಗರ್ : ಒಂದು ಹತ್ತಿಗೆ ಆ್ಯಪಲ್ ವಿನೆಗರ್ ಹಾಕಿ 15 ನಿಮಿಷಗಳ ಕಾಲ ಚಿಮಕಲು ಮಚ್ಚೆ ಮೇಲಿಡಿ. ಪ್ರತಿದಿನ ಹೀಗೆ ಮಾಡುತ್ತ ಬಂದಲ್ಲಿ ವಾರದೊಳಗೆ ಚಿಮಕಲು ಮಚ್ಚೆ ಮಾಯವಾಗುತ್ತದೆ.