alex Certify ಹಿಂದೂಗಳು ಮಾತ್ರವಲ್ಲ, ಮುಸ್ಲಿಮರಿಂದಲೂ ಶಾರುಖ್ ‘ಪಠಾಣ್’ ವಿರುದ್ಧ ಭಾರೀ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂಗಳು ಮಾತ್ರವಲ್ಲ, ಮುಸ್ಲಿಮರಿಂದಲೂ ಶಾರುಖ್ ‘ಪಠಾಣ್’ ವಿರುದ್ಧ ಭಾರೀ ಆಕ್ರೋಶ

ನವದೆಹಲಿ: ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ‘ಪಠಾಣ್’ ಚಿತ್ರದಲ್ಲಿನ ‘ಬೇಷರನ್ ರಂಗ್’ ಹಾಡಿನ ಬಗ್ಗೆ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮುಸ್ಲಿಂ ಸಮುದಾಯವೂ ದೂಷಿಸಿದೆ.

‘ಬೇಷರಂ ರಂಗ್’ ಹಾಡಿನ ಬಗ್ಗೆ ಹಿಂದೂಗಳ ಒಂದು ವಿಭಾಗ ಆಕ್ಷೇಪಿಸಿದ್ದು, ಮಧ್ಯಪ್ರದೇಶದ ಉಲೇಮಾ ಮಂಡಳಿಯು ಇಡೀ “ಮುಸ್ಲಿಂ ಸಮುದಾಯವನ್ನು” ಮಾನಹಾನಿ ಮಾಡುತ್ತದೆ ಎಂದು ‘ಪಠಾನ್’ ಚಿತ್ರವನ್ನು ಟೀಕಿಸಿದೆ.

ಈ ಚಿತ್ರದಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ ಎಂದು ಮಧ್ಯಪ್ರದೇಶದ ಉಲೇಮಾ ಮಂಡಳಿಯ ಅಧ್ಯಕ್ಷ ಸೈಯದ್ ಅನಾಸ್ ಅಲಿ ಹೇಳಿದ್ದಾರೆ.

ಅವರ ಪ್ರಕಾರ, ಪಠಾಣರು ಅತ್ಯಂತ ಗೌರವಾನ್ವಿತ ಮುಸ್ಲಿಂ ಸಮುದಾಯಗಳಲ್ಲಿ ಒಂದಾಗಿದೆ. ‘ಪಠಾಣ್’ ಚಿತ್ರ ಅವರನ್ನು ಮಾತ್ರವಲ್ಲದೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸಿದೆ. ಚಿತ್ರದ ಹೆಸರು ಪಠಾಣ್ ಎಂದಿದ್ದು, ಅದರಲ್ಲಿ ಮಹಿಳೆಯರು ಅಶ್ಲೀಲ ನೃತ್ಯಗಳನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ಪಠಾಣ್‌ ಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದರು.

ಅವರು ಹಾಡನ್ನು ತೆಗೆದುಹಾಕಲು ಒತ್ತಾಯಿಸಿದ್ದು, ಶಾರುಖ್ ಖಾನ್ ಪಾತ್ರದ ಹೆಸರನ್ನು ಬದಲಾಯಿಸಬೇಕು. ಇಲ್ಲವಾದರೆ, ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ. ನಾವು ಕಾನೂನು ಹೋರಾಟ ಮಾಡುತ್ತೇವೆ. ಎಫ್‌ಐಆರ್ ಕೂಡ ದಾಖಲಿಸುತ್ತೇವೆ. ಅವರು ಸೆನ್ಸಾರ್ ಮಂಡಳಿಗೆ ಪತ್ರ ಬರೆಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಹಾಡಿನ ಆಕ್ಷೇಪಾರ್ಹ ಭಾಗಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ ಎಂದಿದ್ದರು.

ತಮ್ಮ ‘ಪಠಾಣ್’ ಚಿತ್ರ ಬಹಿಷ್ಕಾರದ ಬೆದರಿಕೆಗಳ ನಡುವೆ ಶಾರುಖ್ ಖಾನ್ ಗುರುವಾರ ತಮ್ಮಂತಹ ಜನರು ಸಾಮಾಜಿಕ ಮಾಧ್ಯಮದಲ್ಲಿನ ನಕಾರಾತ್ಮಕತೆಯಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...