ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ಆರೋಗ್ಯಕರ ಆಹಾರವನ್ನು ಡಯಟ್ನಲ್ಲಿ ಸೇರಿಸಿಕೊಳ್ಳಬೇಕು.
ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ ಗರ್ಭಾವಸ್ಥೆಯ ಆರಂಭದಲ್ಲಿ ವಾಂತಿ ಮತ್ತು ಭೇದಿ ಸಮಸ್ಯೆಗಳಿರುತ್ತವೆ. ಇದನ್ನು ತಪ್ಪಿಸಲು ಗರ್ಭಿಣಿಯರು ಮೊಸರು ಸೇವಿಸಬೇಕು.ಬಬಾಳೆಹಣ್ಣು ತಿನ್ನುವುದರಿಂದ ಮಗುವಿನ ಮನಸ್ಸು ಚುರುಕಾಗಿರುತ್ತದೆ. ಜೊತೆಗೆ ದೈಹಿಕವಾಗಿಯೂ ಶಿಶು ಆರೋಗ್ಯವಾಗಿರುತ್ತದೆ. ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬಾಳೆಹಣ್ಣುಗಳನ್ನು ಸೇವಿಸಬೇಕು.
ಬಾದಾಮಿ ಕೂಡ ಗರ್ಭಿಣಿಯರಿಗೆ ಅತ್ಯಂತ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಗರ್ಭಿಣಿಯರಿಗೆ ಅನುಕೂಲವಾಗುತ್ತದೆ. ಗರ್ಭಿಣಿಯರ ದಿನನಿತ್ಯದ ಊಟದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಇವುಗಳನ್ನು ಸೇವಿಸುವುದರಿಂದ ಗರ್ಭಿಣಿ ಆರೋಗ್ಯವಾಗಿರುವುದರ ಜೊತೆಗೆ ಮಗು ಕೂಡ ಆರೋಗ್ಯವಾಗಿರುತ್ತದೆ. ಗರ್ಭಿಣಿಯರು ಮೊಟ್ಟೆಯನ್ನು ಸಹ ಸೇವಿಸುವುದು ಉತ್ತಮ. ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್ ಇರುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲ.