ದಾವಣಗೆರೆ: ಜರ್ಮನಿಯಲ್ಲಿ ಮೊಬೈಲ್ ಸ್ಪೋಟವಾಗಿ ದಾವಣಗೆರೆ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ದಾವಣಗೆರೆಯ ಸರಸ್ವತಿ ನಗರದ ನಿವಾಸಿ ಸಂತೋಷ್(30) ಮೃತಪಟ್ಟವರು ಎಂದು ಹೇಳಲಾಗಿದೆ.
ಶಿಕ್ಷಕ ದಂಪತಿ ರೇವಣಸಿದ್ದಪ್ಪ ಮತ್ತು ಇಂದ್ರಮ್ಮ ಅವರ ಪುತ್ರ ಸಂತೋಷ್ ಜರ್ಮನಿಯ ಚಿಮ್ನಿಟ್ಜ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. 2017ರಲ್ಲಿ ವಿದ್ಯಾಭ್ಯಾಸಕ್ಕೆ ಅವರು ಜರ್ಮನಿಗೆ ತೆರಳಿದ್ದರು. ನವೆಂಬರ್ 30ರಂದು ಸಂತೋಷ್ ವಾಸವಾಗಿದ್ದ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಸರ್ಕ್ಯೂಟ್ ಜೊತೆಗೆ ಮೊಬೈಲ್ ಬ್ಲಾಸ್ಟ್ ಆಗಿ ಸಂತೋಷ್ ಸಾವು ಕಂಡಿದ್ದಾರೆ.
16 ದಿನಗಳ ನಂತರ ದಾವಣಗೆರೆಗೆ ಸಂತೋಷ್ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಅವರ ಸ್ವಗ್ರಾಮ ಪುಣಭಘಟ್ಟದಲ್ಲಿ ನಾಳೆ ಅಂತ್ಯಕ್ರಿಯೆ ನೆರವೇರಲಿದೆ.