ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಕೆಲವು ಪ್ರಮುಖ ಸಾಕ್ಷ್ಯ ಸಿಕ್ಕಿದೆ. ಗುರುಗ್ರಾಮ್ನಲ್ಲಿರುವ ಕಾಡಿನಲ್ಲಿ ಪೊಲೀಸರನ್ನು ಸಂಗ್ರಹಿಸಿದ್ದ ಮೂಳೆಗಳು ನಿಜವಾಗಿಯೂ ಅವಳದ್ದೇ ಎಂಬುದು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮೃತ ಶ್ರದ್ಧಾ ವಾಲ್ಕರ್ ನ ತಂದೆಯ ಡಿಎನ್ಎ ಮಾದರಿ, ಕಾಡಿನಲ್ಲಿ ಸಿಕ್ಕ ಮೂಳೆಗಳಿಗೆ ಹೋಲಿಕೆ ಆಗಿರೋ ಪರೀಕ್ಷಾ ವರದಿಯು ಹೊರಬಿದ್ದಿದೆ.
ಕೊಲೆಗಾರ ಅಫ್ತಾಬ್ ಪೂನಾವಾಲಾ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಮೇ ತಿಂಗಳಲ್ಲಿ ತನ್ನ ಲಿವ್ ಇನ್ ರಿಲೇಷನ್ ಶಿಪ್ ಸಂಗಾತಿ ಶ್ರದ್ಧಾ ವಾಲ್ಕರ್ ನ ಹತ್ಯೆ ಮಾಡಿದ್ದ. ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಫ್ರಿಡ್ಜ್ ನಲ್ಲಿಟ್ಟು ಪ್ರತಿದಿನ 2 ತುಂಡುಗಳಂತೆ ಕಾಡಿನಲ್ಲಿ ಎಸೆದಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪುರಾವೆಗಳ ಪಟ್ಟಿಯಲ್ಲಿ ಅಫ್ತಾಬ್ ಬಳಸಿದ ಕೆಲವು ಚಾಕುಗಳನ್ನು ಸಂಗ್ರಹಿಸಿದ್ದರು. ಕೊಲೆ ಮಾಡಿದ್ದಾಗಿ ಆರೋಪಿಯೂ ತಪ್ಪೊಪ್ಪಿಕೊಂಡಿದ್ದ. ಆದಾಗ್ಯೂ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ನಡೆಸಿದ್ದರು.
ಡೇಟಿಂಗ್ ಅಪ್ಲಿಕೇಶನ್ನಲ್ಲಿ ಪರಿಚಯವಾದ ಶ್ರದ್ಧಾ ಮತ್ತು ಅಫ್ತಾಬ್ ಮೇ ತಿಂಗಳಲ್ಲಿ ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಮುಂಬೈನಲ್ಲಿ ವಾಸಿಸುತ್ತಿದ್ದರು.