ಕಳ್ಳರು ಕೃತ್ಯಕ್ಕಿಳಿದಾಗ ತಾವೇ ಬುದ್ಧಿವಂತರು ಅಂದುಕೊಳ್ಳುತ್ತಾರೆ. ಆದ್ರೆ ಕಳ್ಳನಿಗೇ ಚಳ್ಳೆಹಣ್ಣು ತಿನ್ನಿಸುವಂತಹ ಘಟನೆಗಳೂ ನಡೆದಿದೆ. ಇಂಗ್ಲೆಂಡ್ನ ವೆಸ್ಟ್ ಯಾರ್ಕ್‌ಷೈರ್‌ನ ಡ್ಯೂಸ್‌ಬರಿಯಲ್ಲಿರುವ ಫೋನ್ ಮಾರ್ಕೆಟ್ ಅಂಗಡಿಯಿಂದ ಅತ್ಯಾಧುನಿಕ ಫೋನ್ ಅನ್ನು ಕದಿಯಲು ಕಳ್ಳ ಪ್ರಯತ್ನಿಸುತ್ತಾನೆ. ಆದರೆ ತಕ್ಷಣವೇ ತಿರುಗಿ ಅದನ್ನು ಅಂಗಡಿಯ ಮ್ಯಾನೇಜರ್‌ಗೆ ಹಿಂತಿರುಗಿಸಬೇಕಾಯಿತು.
ಅರೆ ! ಅದು ಹೇಗೆ ಸಂಭವಿಸಿತು ಎಂದರೆ 1,600 ಪೌಂಡ್‌ಗಳಷ್ಟು ಬೆಲೆಬಾಳುವ ಮೊಬೈಲ್ ಹ್ಯಾಂಡ್‌ಸೆಟ್ ಎತ್ತಿಕೊಂಡ ಆತ ತಾನೇ ಬುದ್ಧಿವಂತೆ ಎಂದುಕೊಂಡು ತಕ್ಷಣ ಅಲ್ಲಿಂದ ಕಾಲ್ಕೀಳಲು ಶುರು ಮಾಡುತ್ತಾನೆ. ಬಾಗಿಲ ಹತ್ತಿರ ಓಡಿ ಬಂದಾಗ ಗಾಜಿನ ಬಾಗಿಲುಗಳು ಬಂದ್ ಆಗಿರುತ್ತವೆ.
ಅಂಗಡಿಯಿಂದ ಹೊರಹೋಗಲಾಗದೇ ಪೆಚ್ಚುಮೋರೆ ಹಾಕಿಕೊಂಡು ವಾಪಸ್ ಅಂಗಡಿಯ ವ್ಯವಸ್ಥಾಪಕನ ಹತ್ತಿರ ಬಂದು ಮೊಬೈಲ್ ವಾಪಸ್ ನೀಡುತ್ತಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
https://twitter.com/UOldguy/status/1602387431986429952?ref_src=twsrc%5Etfw%7Ctwcamp%5Etweetembed%7Ctwterm%5E1602387431986429952%7Ctwgr%5Ee808fc6d01a8b2034b16eb198f0cb1ec086bfce1%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-thief-tries-to-run-away-with-smartphone-stopped-by-jammed-door-3603205