ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಿಗೆ ಅವಿನಾಭಾವ ಸಂಬಂಧ. ಅಂಥದ್ದೇ ಒಂದು ಭಾವನಾತ್ಮಕ ವಿಡಿಯೋ ಈಗ ವೈರಲ್ ಆಗಿದೆ. ಇದು ಪೆಂಗ್ವಿನ್ ಪಕ್ಷಿಯ ವಿಡಿಯೋ.
ಪಾರ್ಕಿಂಗ್ ಸ್ಥಳದಲ್ಲಿ ವಯಸ್ಸಾದ ಮಹಿಳೆಯ ಬಳಿಗೆ ಪೆಂಗ್ವಿನ್ ಸಾಗಿದ್ದು, ಆ ಮಹಿಳೆ ಅದರ ಜತೆ ಮಾತನಾಡುವಂತೆ ಕಾಣಿಸುತ್ತದೆ.
ಪಾರ್ಕಿಂಗ್ ಸ್ಥಳದಲ್ಲಿ ವಯಸ್ಸಾದ ಮಹಿಳೆ ನಿಧಾನವಾಗಿ ನಡೆಯುವುದನ್ನು ನೋಡಬಹುದು.
ನಂತರ, ನಿಧಾನವಾಗಿ ಹೆಜ್ಜೆ ಇಡುತ್ತಾ ಆಕೆಯ ಬಳಿ ಪೆಂಗ್ವಿನ್ ಬರುತ್ತದೆ. ಮಹಿಳೆ ಅದರ ಜತೆ ಮಾತನಾಡುತ್ತಾಳೆ. ಅದು ಕೂಡ ಏನೋ ಹೇಳುತ್ತದೆ. ಹೀಗೆ ಕೆಲವು ಸೆಕೆಂಡ್ ಇಬ್ಬರ ಮಾತುಕತೆ ನಡೆಯುತ್ತದೆ. ಮಹಿಳೆಯ ಜತೆಗೆ ತಾನೂ ಬರುತ್ತೇನೆ ಎನ್ನುವಂತೆ ಪೆಂಗ್ವಿನ್ ಆಕೆಯ ಹಿಂದಿಂದೆಯೇ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು ಗೇಬ್ರಿಯೆಲ್ ಕಾರ್ನೊ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.