ಸಾಮಾಜಿಕ ಮಾಧ್ಯಮವು ಹೃದಯಸ್ಪರ್ಶಿ ಪೋಸ್ಟ್‌ಗಳ ನಿಧಿಯಾಗಿದ್ದು ಕೆಲವೊಂದು ವಿಡಿಯೋಗಳು ಭಾವುಕರನ್ನಾಗಿ ಮಾಡುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋ ಅನ್ನು ದೇಶೆಂಡೆ ಎನ್ನುವವರು ಶೇರ್ ಮಾಡಿದ್ದಾರೆ. ಇವರು ತಮ್ಮ ತಂದೆಗಾಗಿ 2016 ರ ʼಯುವರ್ ನೇಮ್ʼ ಚಲನಚಿತ್ರದ ಡಿವಿಡಿಯನ್ನು ಅಮೇಜಾನ್ನಲ್ಲಿ ಆರ್ಡರ್ ಮಾಡಿದ್ದರು. ಅಮೇಜಾನ್ ಅದನ್ನು ಡೆಲಿವರಿ ಮಾಡಿತ್ತು. ಅದರೆ ಡೆಲಿವರಿ ಏಜೆಂಟ್ ಆರ್ಡರ್ ಜತೆಗೆ ಒಂದು ಟಿಪ್ಪಣಿಯನ್ನು ಬರೆದು ಹೋಗಿದ್ದನ್ನು ಡೇಶೆಂಡ್ ಶೇರ್ ಮಾಡಿದ್ದಾರೆ. ಚಿತ್ರದ ವಿಮರ್ಶೆಯನ್ನು ಬರೆದು ಹೋಗಿದ್ದ ಏಜೆಂಟ್ಗೆ ಧನ್ಯವಾದ ತಿಳಿಸಿದ್ದಾರೆ.
ಈಗ ವೈರಲ್ ಆಗಿರುವ ಪೋಸ್ಟ್ ಅನ್ನು ದೇಶೇಂಡೆ ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಕೋಟೊ ಶಿಂಕೈ ನಿರ್ದೇಶಿಸಿದ ಜಪಾನೀಸ್ ಅನಿಮೇಟೆಡ್ ರೊಮ್ಯಾಂಟಿಕ್ ಫ್ಯಾಂಟಸಿ ಚಿತ್ರವನ್ನು ಆರ್ಡರ್ ಮಾಡಿದ್ದೆ. ಆದರೆ ಏಜೆಂಟ್ ಅದರ ಜತೆಗೆ ವಿಮರ್ಶೆ ಬರೆದು ಹೋಗಿದ್ದಾರೆ.
“ಚಲನಚಿತ್ರ ಚೆನ್ನಾಗಿತ್ತು, ನಾನು ಅಳುತ್ತಿದ್ದೆ” ಎಂದು ಬರೆದಿದ್ದಾರೆ. ಇದು ನನಗೆ ತುಂಬಾ ಇಷ್ಟವಾಯಿತು ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಏಜೆಂಟ್ನ ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಹಲವು ನೆಟ್ಟಿಗರು ಈ ಚಿತ್ರದ ವಿಮರ್ಶೆಯನ್ನು ಮಾಡಿದ್ದು, ತಾವು ಅನೇಕ ಬಾರಿ ಈ ಚಿತ್ರ ನೋಡಿರುವುದಾಗಿ ಹೇಳಿದ್ದಾರೆ.