‘ಜಮ್ತಾರಾ’ ನೆಟ್ಫ್ಲಿಕ್ಸ್ ನಲ್ಲಿ ಬಂದ ಸೂಪರ್ಹಿಟ್ ವೆಬ್ ಸಿರೀಸ್. ಇದರಲ್ಲಿ ಒಂದೇ ಒಂದು ಕರೆಯ ಮೂಲಕ ಖದೀಮರು ಹೇಗೆ ನಿಮ್ಮ ಖಾತೆಯಲ್ಲಿದ್ದ ಹಣವನ್ನ ಉಡೀಸ್ ಮಾಡ್ತಾರೆ ಅನ್ನೋದನ್ನ ಡಿಟೈಲ್ ಆಗಿ ತೋರಿಸಲಾಗಿದೆ. ಇದು ಕಾಲ್ಪನಿಕ ಕಥೆ ಅಲ್ಲ, ಇದು ವಾಸ್ತವದ ಚಿತ್ರಣ. ಜನರಿಗೆ ಈ ರೀತಿಯ ಘಟನೆಗಳ ಕುರಿತು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಜನರು ಒಂದು ಕ್ಷಣ ಮೈಮರೆತು ವರ್ತಿಸಿದರೆ ಸಾಕು, ಅಲ್ಲಿ ಆಗೋದೇ ಬೇರೆ ಕಥೆ ದೆಹಲಿಯಲ್ಲೂ ಈಗ ಇದೇ ರೀತಿಯ ಒಂದು ಘಟನೆ ನಡೆದಿದ್ದು ಒಂದೇ ಒಂದು ಕರೆಯಿಂದ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಯನ್ನ ಕಳೆದುಕೊಂಡಿದ್ದಾರೆ.
ದಹಲಿಯಲ್ಲಿ ಕೆಲವು ದಿನಗಳ ಹಿಂದೆ ಭದ್ರತಾ ಸೇವಾ ಸಂಸ್ಥೆಯ ನಿರ್ದೇಶಕರೊಬ್ಬರು ಬ್ಯಾಂಕ್ ಕರೆಗಳ ಮೂಲಕ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನಡೆದ ಅತಿದೊಡ್ಡ ಸೈಬರ್ ಅಪರಾಧ ವಂಚನೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ಪೋಲಿಸರು ಕೊಟ್ಟ ಮಾಹಿತಿ ಪ್ರಕಾರ ಈ ವ್ಯಕ್ತಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹಲವಾರು ಬ್ಯಾಂಕ್ ಕರೆಗಳನ್ನು ಸ್ವೀಕರಿಸಿದ್ದಾರೆ ಮತ್ತು ಅದರ ನಂತರ ಹಲವಾರು ಆರ್ಟಿಜಿಎಸ್ ವಹಿವಾಟು ಸಂದೇಶಗಳನ್ನು ಸಹ ಇವರು ತಮ್ಮ ಮೊಬೈಲ್ ಫೋನ್ ನಲ್ಲಿ ಕಂಡುಕೊಂಡಿದ್ದಾರೆ.
ಸುಮಾರು 12 ಲಕ್ಷ ರೂಪಾಯಿಗಳನ್ನು ಭಾಸ್ಕರ್ ಮಂಡಲ್ ಎಂಬವರ ಒಂದು ನಿರ್ದಿಷ್ಟ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದ್ದು, ತಲಾ 10 ಲಕ್ಷ ರೂಪಾಯಿಗಳನ್ನು ಇತರರ ಬ್ಯಾಂಕ್ ಖಾತೆಗಳಿಗೆ ಮತ್ತು 4.6 ಲಕ್ಷ ರೂಪಾಯಿಗಳನ್ನು ಅವಿಜಿತ್ ಗಿರಿ ಎಂಬಾತನಿಗೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಸ್ಪ್ಯಾಮರ್ ಗಳು ‘ಸಿಮ್ ಸ್ಪ್ಯಾಪ್ʼ ತಂತ್ರವನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರಲ್ಲಿ ಸ್ಪಾಮರ್ ಗಳು ಎರಡು-ಅಂಶ ದೃಢೀಕರಣ ವ್ಯವಸ್ಥೆಯಲ್ಲಿ ಲೋಪವನ್ನು ಕಂಡುಕೊಳ್ಳುತ್ತಾರೆ, ಇದರಲ್ಲಿ ಎರಡನೇ ಹಂತವು ಪಠ್ಯ ಸಂದೇಶ ಅಥವಾ ಫೋನ್ ಗೆ ಕರೆ ಬಂದಿದೆ. “ಈ ವಂಚನೆಯಲ್ಲಿ, ಸ್ಪ್ಯಾಮರ್ ಗಳು ಜನರ ಮೊಬೈಲ್ ಫೋನ್ ವಾಹಕಗಳನ್ನು ಸಹ ಸಂಪರ್ಕಿಸುತ್ತಾರೆ ಮತ್ತು ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಅವರನ್ನು ಮೋಸಗೊಳಿಸುತ್ತಾರೆ. ಇದು ಸಂಭವಿಸಿದ ನಂತರ, ಅವರು ಫೋನ್ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ವಂಚಕರು ಸಮಾನಾಂತರ ಕರೆ ಮೂಲಕ ದೂರವಾಣಿಯಲ್ಲಿ ಒಟಿಪಿಗಳನ್ನು ಕೇಳುತ್ತಿರಬಹುದು ಎಂದು ಮತ್ತೊಬ್ಬ ವ್ಯಕ್ತಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆದಾಗ್ಯೂ, ಅವರು ಫೋನ್ ಹೈಜಾಕ್ ಸೇರಿದಂತೆ ಇತರ ಆಯಾಮಗಳ ಬಗ್ಗೆಯೂ ಸಹ ತನಿಖೆ ನಡೆಸುತ್ತಿದ್ದಾರೆ. ಈ ಖದೀಮರು ಜಾರ್ಖಂಡ್ ನ ಜಮ್ತಾರಾ ದಲ್ಲಿ ನೆಲೆಗೊಂಡಿರಬಹುದು ಮತ್ತು ಹಣವನ್ನು ಯಾರ ಖಾತೆಗಳಿಗೆ ವರ್ಗಾಯಿಸಲಾಗಿದೆಯೋ ಅವರು ಅವುಗಳನ್ನು ಕೇವಲ ಶುಲ್ಕ ಅಥವಾ ಬಾಡಿಗೆಗೆ ಒದಗಿಸಬಹುದು ಎಂದು ಸುದ್ದಿ ಮಾಧ್ಯಮದ ವರದಿ ಹೇಳಿದೆ.