ಬೆಲ್ಜಿಯಂನ ಒಂದು ಸಣ್ಣ ಹಳ್ಳಿಯಲ್ಲಿ, 165 ಜನರ ಗುಂಪು ರಜಾ ಕಾಲಕ್ಕೆ ಸರಿಯಾಗಿ ನೂರಾರು ಸಾವಿರ ಯೂರೋಗಳನ್ನು ಗೆದ್ದಿದೆ. ವಿಜೇತರು ಆಂಟ್ವೆರ್ಪ್ ಪ್ರಾಂತ್ಯದ ಓಲ್ಮೆನ್ ಎಂಬ ಸಣ್ಣ ಹಳ್ಳಿಯಿಂದ ಬಂದವರು.
ಅಚ್ಚರಿಯ ಸಂಗತಿಯೆಂದರೆ ಇವರಲ್ಲಿ ಪ್ರತಿಯೊಬ್ಬರೂ ಕನಿಷ್ಠ €15 (1315 ರೂಪಾಯಿ) ಬಹುಮಾನವನ್ನು ಲಾಟರಿಯಿಂದ ಗೆದ್ದಿದ್ದಾರೆ. ಇವರ ಪೈಕಿ ಕೆಲವರು €870,000 (ಸುಮಾರು 7.63 ಕೋಟಿ ರೂಪಾಯಿ)ಕ್ಕಿಂತ ಅಧಿಕ ಮೊತ್ತ ಗಳಿಸಿದ್ದಾರೆ. ಇದನ್ನು ಕೇಳಿ ವಿಜೇತರ ಪೈಕಿ ಹಲವರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಬಹುಮಾನದ ಮೊತ್ತ ಭಾರಿ ಆಗಿರುವ ಕಾರಣ ಎಲ್ಲರಿಗೂ ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರ್ಧದಷ್ಟು ಮೊತ್ತವನ್ನು ಬ್ಯಾಂಕ್ಗೆ ಜಮಾ ಮಾಡಲಾಗುತ್ತಿದೆ. ವಿಜೇತರಲ್ಲಿ ಒಬ್ಬಾತ ತನ್ನ ಮೂವರು ಮಕ್ಕಳು ಮತ್ತು ಎಂಟು ಮೊಮ್ಮಕ್ಕಳಿಗೆ ಹಣ ಹಂಚುವುದಾಗಿ ಹೇಳಿದರೆ, ಇನ್ನೊಬ್ಬಾತ ವಿಶ್ವ ಪರ್ಯಟನೆಗೆ ಸಜ್ಜಾಗಿದ್ದಾನೆ. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ.