ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ.
ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ ಮತ್ತು ಫೈಟೊಕೆಮಿಕಲ್ ಗಳಿವೆ. ಕಿವಿಯನ್ನು ಜೀವಸತ್ವಗಳ ಉತ್ತಮ ಮೂಲವೆಂದು ಹೇಳಲಾಗುತ್ತದೆ. ಕಿವಿಯಲ್ಲಿರುವ ಫೀನಾಲಿಕ್ಸ್ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ. ಕಿವಿಯಲ್ಲಿರುವ ಎಲ್ಲಾ ಜೀವಸತ್ವಗಳು ಚರ್ಮದ ಸಮಸ್ಯೆಯನ್ನು ಗುಣಪಡಿಸುತ್ತವೆ.
ಮೊಸರು ಮತ್ತು ಕಿವಿ ಫೇಸ್ ಪ್ಯಾಕ್ ಮಾಡುವುದು ಸುಲಭ. ಇದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಕಿವಿ ತಿರುಳಿಗೆ 1 ಟೀಸ್ಪೂನ್ ಮೊಸರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕುತ್ತಿಗೆ ಮತ್ತು ಮುಖದ ಮೇಲೆ ಚೆನ್ನಾಗಿ ಹಚ್ಚಿ. 15 ರಿಂದ 20 ನಿಮಿಷಗಳ ಕಾಲ ಬಿಟ್ಟು ಮುಖವನ್ನು ನೀರಿನಲ್ಲಿ ತೊಳೆಯಿರಿ.
ಕಿವಿ ಹಣ್ಣಿನ ಜೊತೆ ಬಾದಾಮಿ, ಕಡಲೆ ಹಿಟ್ಟನ್ನು ಸೇರಿಸಿ ಫೇಸ್ ಪ್ಯಾಕ್ ಮಾಡಿ ಹಚ್ಚುವುದು ಕೂಡ ಪ್ರಯೋಜನಕಾರಿ. ಕಿವಿ ಹಣ್ಣು, 3-4 ಬಾದಾಮಿ ಹಾಗೂ 1 ಚಮಚ ಕಡಲೆ ಹಿಟ್ಟು ಬೇಕಾಗುತ್ತದೆ. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಪುಡಿ ಮಾಡಿ ಇದಕ್ಕೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಮುಖ ತೊಳೆಯಬೇಕು.
ಕಿವಿ ಹಣ್ಣಿಗೆ ಒಂದು ಚಮಚ ನಿಂಬೆ ರಸ ಬೆರೆಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬಹುದು. ಕಿವಿ ಹಣ್ಣಿನ ಜೊತೆ ಬಾಳೆ ಹಣ್ಣನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳಬಹುದು.