ಬ್ರಾ ಸ್ತನಗಳಿಗೆ ರಕ್ಷಾಕವಚವಿದ್ದಂತೆ. ಮಹಿಳೆಯರಿಗೆ ಅತ್ಯಂತ ಅಗತ್ಯವಾದ ಒಳ ಉಡುಪು. ಬ್ರಾ ಇಲ್ಲದ ಬದುಕನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಆದ್ರೆ ಬ್ರಾ ಬಗೆಗಿನ ಕೆಲವೊಂದು ತಪ್ಪು ಕಲ್ಪನೆಗಳು, ಸುಳ್ಳು ವದಂತಿಗಳು ಮಹಿಳೆಯರನ್ನು ಆತಂಕಕ್ಕೆ ದೂಡುತ್ತವೆ. ಅವು ಯಾವುದು ಅನ್ನೋದನ್ನು ನೋಡೋಣ.
ಬ್ರಾ ಧರಿಸಿದ್ರೆ ಸ್ತನ ಕ್ಯಾನ್ಸರ್ ಬರುತ್ತದೆ ಎನ್ನುವ ವದಂತಿಗಳಿವೆ. ಆದ್ರೆ ಇದು ತಪ್ಪು ಕಲ್ಪನೆ. ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವಿಲ್ಲ.
ಉಡುಪಿನ ಒಳಗೆ ಧರಿಸಿರುವ ಬ್ರಾ ಸ್ವಲ್ಪ ಕಂಡರೂ ಸಂಪ್ರದಾಯ ಉಲ್ಲಂಘನೆ ಅನ್ನೋ ಭಾವನೆ ಕೆಲವರಲ್ಲಿದೆ. ಹಾಗಾಗಿ ಯಾವಾಗಲೂ ತಿಳಿ ಬಣ್ಣದ ಬ್ರಾಗಳನ್ನೇ ಹೆಚ್ಚಾಗಿ ಧರಿಸುತ್ತಾರೆ.
ನೀವು ಧರಿಸುವ ಬ್ರಾಗಳನ್ನು ಪದೇ ಪದೇ ತೊಳೆಯಬಾರದು ಅನ್ನೋ ತಪ್ಪು ಕಲ್ಪನೆಯೂ ಇದೆ. ಆದ್ರೆ ಪ್ರತಿ ಬಾರಿ ಧರಿಸಿದ ಬಳಿಕ ಬ್ರಾವನ್ನು ಸ್ವಚ್ಛವಾಗಿ ತೊಳೆಯಲೇಬೇಕು. ನಿಮ್ಮ ದೇಹದ ಬೆವರು ಮತ್ತು ಕೀಟಾಣುಗಳು ಅಂಟಿಕೊಂಡಿರುತ್ತವೆ.
ಒಂದೇ ಬ್ರಾವನ್ನು ಕೆಲವರು ಎರಡು ದಿನಗಟ್ಟಲೆ ಧರಿಸುತ್ತಾರೆ. ಅದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಬ್ರಾನಲ್ಲಿರೋ ಎಲಾಸ್ಟಿಕ್ ದೊಡ್ಡದಾಗಿ ಬಿಡುತ್ತದೆ. ತೊಳೆದ ನಂತರ ಮೊದಲಿನ ಶೇಪ್ ಗೆ ಬರಲು ಅದಕ್ಕೆ ಒಂದು ದಿನ ಸಮಯ ಬೇಕು.
ಬಿಳಿ ಶರ್ಟ್ ಒಳಕ್ಕೆ ಕೆಂಪು ಬ್ರಾ ಧರಿಸಲೇಬಾರದು ಅನ್ನೋ ಭಾವನೆ ಬಹಳಷ್ಟು ಜನರಲ್ಲಿದೆ. ಆದ್ರೆ ಅದು ತಪ್ಪು. ವೈಟ್ ಶರ್ಟ್ ಜೊತೆಗೆ ರೆಡ್ ಬ್ರಾ ಒಳ್ಳೆ ಕಾಂಬಿನೇಶನ್. ಸುಂದರವಾಗಿ ಕಾಣುತ್ತದೆ.
ಎಲ್ಲಾ ಬ್ರಾಂಡ್ ನಲ್ಲೂ ಬ್ರಾ ಸೈಜ್ ಗಳು ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಹೊಸ ಬ್ರಾಂಡ್ ನ ಬ್ರಾ ಕೊಳ್ಳುವ ಮುನ್ನ ಸೈಜ್ ಸರಿಯಿದೆಯಾ ಎಂದು ಟ್ರೈ ಮಾಡಿ ನೋಡಿಕೊಳ್ಳಿ.
ನೀವು ಧರಿಸುವ ಬ್ರಾಗಳನ್ನು ಯಾವುದೇ ಕಾರಣಕ್ಕೂ ವಾಷಿಂಗ್ ಮಷಿನ್ ನಲ್ಲಿ ತೊಳೆಯಬೇಡಿ. ಕೈಗಳಿಂದ್ಲೇ ತೊಳೆಯುವುದು ಉತ್ತಮ. ವಾಷಿಂಗ್ ಮಷಿನ್ ಗೆ ಹಾಕಿದರೆ ಬ್ರಾ ಶೇಪ್ ಕೂಡ ಹಾಳಾಗುತ್ತದೆ.
ಬ್ರಾ ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬ ಭಾವನೆ ತಪ್ಪು. ಬ್ರಾ ಬಾಳಿಕೆ ಬರುವುದು ಕೇವಲ 6-9 ತಿಂಗಳು ಮಾತ್ರ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಸಿದ್ರೆ ಹರಿದು ಹೋಗುವ ಸಾಧ್ಯತೆ ಹೆಚ್ಚು.