alex Certify ಟ್ವಿಟರ್​ ಬಳಕೆದಾರರಿಗೆ ಗುಡ್ ನ್ಯೂಸ್: ಅಕ್ಷರದ ಮಿತಿ 4 ಸಾವಿರಕ್ಕೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಬಳಕೆದಾರರಿಗೆ ಗುಡ್ ನ್ಯೂಸ್: ಅಕ್ಷರದ ಮಿತಿ 4 ಸಾವಿರಕ್ಕೆ ಏರಿಕೆ

ನವದೆಹಲಿ: ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್​ನಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತಿದೆ. ಈಗ ಟ್ವಿಟರ್ ಅಕ್ಷರದ ಮಿತಿಯನ್ನು 280 ರಿಂದ 4000 ಕ್ಕೆ ಹೆಚ್ಚಿಸಲು ಮಸ್ಕ್​ ನಿರ್ಧರಿಸಿದ್ದಾರೆ, ಬಳಕೆದಾರರು ತಮ್ಮ ಸಂದೇಶಗಳನ್ನು 280 ಅಕ್ಷರಗಳ ಮಿತಿಯಿಂದ 4 ಸಾವಿರವರೆಗೆ ಬರೆಯಬಹುದಾಗಿದೆ.

2017ರ ನವೆಂಬರ್​ 8ರಂದು ಟ್ವಿಟರ್​ ತನ್ನ ಅಕ್ಷರಗಳ ಮಿತಿಯನ್ನು 140 ರಿಂದ 280 ಕ್ಕೆ ದ್ವಿಗುಣಗೊಳಿಸಿತ್ತು. ಇದರ ಹೊರತಾಗಿಯೂ ಹಲವರಿಗೆ ಇದು ಕಿರಿಕಿರಿಯಾಗುತ್ತಿತ್ತು. ಆದ್ದರಿಂದ ಸರಣಿ ಟ್ವೀಟ್​ ಮಾಡಬೇಕಿತ್ತು. ಇದೀಗ ಒಂದೇ ಟ್ವೀಟ್​ನಲ್ಲಿ ಎಲ್ಲವನ್ನೂ ಹೇಳಲು ಅವಕಾಶ ಕಲ್ಪಿಸಲಾಗಿದೆ.

ಇನ್ನು, ಟ್ವಿಟರ್ ಬ್ಲೂನ ಪರಿಷ್ಕೃತ ಆವೃತ್ತಿಯು ಆಪಲ್ ಗ್ರಾಹಕರಿಗೆ ಮರು ಪ್ರಾರಂಭಿಸುವುದಾಗಿ ಎಲಾನ್​ ಮಸ್ಕ್​ ತಿಳಿಸಿದ್ದಾರೆ. ಸಂಸ್ಥೆಯ ಪ್ರಕಾರ, ಬಳಕೆದಾರರು ವೆಬ್‌ಗಾಗಿ ತಿಂಗಳಿಗೆ $8 ಮತ್ತು ಆ್ಯಪಲ್ ಐಒಎಸ್​ಗಾಗಿ ತಿಂಗಳಿಗೆ $11 ಗೆ ನವೀಕರಿಸಿದ ಸೇವೆಗೆ ಚಂದಾದಾರರಾಗಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...