27 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬ್ರಿಟಿಷ್ ಬೆಕ್ಕು ಈಗ ದೀರ್ಘಕಾಲ ಬಾಳಿರುವ ಬೆಕ್ಕು ಎಂದು ದಾಖಲೆ ಪುಟ ಸೇರಿದೆ. 26 ವರ್ಷ 316 ದಿನಗಳ ಫ್ಲೋಸ್ಸಿ ಎಂಬ ಬೆಕ್ಕು ಇದಾಗಿದೆ.
ಬೆಕ್ಕಿನ ಹಾಗೂ ಮನುಷ್ಯರ ಆಯಸ್ಸಿಗೆ ಹೋಲಿಸುವುದಾದರೆ 27 ವರ್ಷಗಳು ಎಂದರೆ ಮನುಷ್ಯರ ಲೆಕ್ಕದಲ್ಲಿ ಸರಿಸುಮಾರು 120 ವರ್ಷಗಳು. ಕಳಪೆ ದೃಷ್ಟಿ ಮತ್ತು ಕಿವುಡ ಆಗಿದ್ದರೂ ಈ ಬೆಕ್ಕು ಉತ್ತಮ ಆರೋಗ್ಯ ಹೊಂದಿದೆ.
ಸೌಮ್ಯ ಸ್ವಭಾವದ ಮತ್ತು ಮುದ್ದಾಡಬೇಕು ಎಂದು ಕಾಣಿಸುವ ಈ ಬೆಕ್ಕು ಇದಾಗಲೇ ಹಲವರ ಮನೆಯಲ್ಲಿ ಬೆಳೆದಿದೆ. ಕಂದು ಮತ್ತು ಕಪ್ಪು ಬಣ್ಣಗಳಿಂದ ಈಗಲೂ ಆಕರ್ಷಿತವಾಗಿದೆ. ಸದ್ಯ ವಿಕ್ಕಿ ಎಂಬುವವರ ಮನೆಯಲ್ಲಿ ಇದು ಬೆಳೆಯುತ್ತಿದೆ. ಅವಳ ಕಿವುಡುತನದಿಂದ ತೊಂದರೆಗೊಳಗಾಗುವುದಿಲ್ಲ ಮತ್ತು ದೃಷ್ಟಿ ಕೊರತೆಯ ಹೊರತಾಗಿಯೂ ಹೊಸ ಪರಿಸರಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಾಳೆ ಎಂದು ವಿಕ್ಕಿ ಹೇಳುತ್ತಾರೆ.
ಪ್ರತಿದಿನ, ಫ್ಲೋಸ್ಸಿ ತನ್ನ ನೆಚ್ಚಿನ ಹಳದಿ ಕಂಬಳಿಯಲ್ಲಿ ಮಲಗುತ್ತಾಳೆ. ಏನೇ ಆಹಾರ ಕೊಟ್ಟರೂ ತಿನ್ನುತ್ತಾಳೆ ಎಂದು ಇದನ್ನು ಸಲಹಿದವರು ಹೇಳುತ್ತಾರೆ.