ನವದೆಹಲಿ: ಭಾರತೀಯ ರೂಪಾಯಿ ಪ್ರತಿ ಕರೆನ್ಸಿ ಎದುರು ಪ್ರಬಲವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಕರೆನ್ಸಿ ವಿರುದ್ಧ ಭಾರತೀಯ ರೂಪಾಯಿ ಪ್ರಬಲವಾಗಿದೆ. ಡಾಲರ್-ರೂಪಾಯಿ ಏರಿಳಿತವು ಹೆಚ್ಚು ಹೋಗದಂತೆ ನೋಡಿಕೊಳ್ಳಲು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಬೇಕಾದ ವಿದೇಶಿ ವಿನಿಮಯಗಳನ್ನು ರಿಸರ್ವ್ ಬ್ಯಾಂಕ್ ಬಳಸಿದೆ ಎಂದು ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೇವಲ US ಡಾಲರ್ಗೆ ಸಂಬಂಧಿಸಿದಂತೆ, ಫೆಡ್ ನೀತಿಗಳಿಂದ ಡಾಲರ್ ಬಲಗೊಳ್ಳುತ್ತಿದೆ. ಪ್ರತಿ ಕರೆನ್ಸಿ ವಿರುದ್ಧ ಭಾರತೀಯ ರೂಪಾಯಿ ಪ್ರಬಲವಾಗಿದೆ ಎಂದರು.