ಬೆಂಗಳೂರು: ಡ್ಯೂಟಿ ಹಾಕಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಬಿಎಂಟಿಸಿಯ 10 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದರೆ 10 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ಡ್ಯೂಟಿ ಹಾಕಿಸಿಕೊಳ್ಳಲು ವಾರಕ್ಕೆ 500, ತಿಂಗಳಿಗೆ 2000 ರೂಪಾಯಿಯಂತೆ ಅಧಿಕಾರಿಗಳಿಗೆ ಲಂಚ ನೀಡಬೇಕಿತ್ತು. ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಾವತಿಸಿದರೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಡ್ಯೂಟಿ ಹಾಕುತ್ತಿದ್ದರು. ಬಿಎಂಟಿಸಿ ಲಂಚಾವತಾರದ ಬಗ್ಗೆ ನೊಂದ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ಆಧರಿಸಿ ತನಿಖೆ ನಡೆಸಿದ ಬಿಎಂಟಿಸಿ ಎಂಡಿ ಸತ್ಯವತಿ ಹಾಗೂ ಬಿಎಂಟಿಸಿ ಭದ್ರತೆ ಹಾಗೂ ಜಾಗೃತ ವಿಭಾಗದ ಮುಖ್ಯಸ್ಥೆ ಜಿ.ರಾಧಿಕಾ ನೇತೃತ್ವದ ತಂಡ 10 ಅಧಿಕಾರಿಗಳನ್ನು ಅಮಾನತು ಮಾಡಿದೆ.
ಬಿಎಂಟಿಸಿ ಡಿಪೋ 8ರ ಕಾನ್ಸ್ ಟೇಬಲ್ ಕೆ.ರಮೇಶ್, ಮೇಲ್ವಿಚಾರಕ ಮೊಹಮ್ಮದ್ ರಫಿ, ಕಿರಿಯ ಸಹಾಯಕ ಕೆ.ಎಸ್.ಚಂದನ್, ಕಾನ್ಸ್ ಟೇಬಲ್ ಇಬ್ರಾಹಿಂ, ಜನೀವುಲ್ಲಾ, ಚಾಲಕ ಹೆಚ್.ಎಂ.ಗೋವರ್ಧನ್,. ಸಹಾಯಕ ಕೆ.ಶರವಣ ಸೇರಿದಂತೆ 10 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.