ಜೀವ ಗಟ್ಟಿಯಿದ್ದರೆ ಹೇಗಾದರೂ ಪಾರಾಗುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಘಟನೆ ನಡೆದಿರುವುದು ಕಲಬುರ್ಗಿ ರೈಲು ನಿಲ್ದಾಣದಲ್ಲಿ.
ಒಬ್ಬ ಮಹಿಳೆ ಮತ್ತು ಆಕೆಯ ಮಗ ರೈಲ್ವೆ ಹಳಿಯನ್ನು ದಾಟುತ್ತಿದ್ದಾಗ ಅದೇ ಹಳಿಯಲ್ಲಿ ರೈಲು ಬಂದು ಬಿಟ್ಟಿದೆ. ಏನು ಮಾಡಬೇಕು ಎಂದು ತಿಳಿಯದೆ ಇಬ್ಬರೂ ರೈಲಿನ ಪಕ್ಕದ ಗೋಡೆಗೆ ಅಂಟಿ ಕುಳಿತುಕೊಂಡಿದ್ದಾರೆ.
ರೈಲು ಹೋಗುತ್ತಿದ್ದಂತೆಯೇ ತಾಯಿ-ಮಗ ಇಬ್ಬರ ಕಥೆ ಮುಗಿಯಿತು ಎಂದುಕೊಳ್ಳುವವರೇ ಎಲ್ಲಾ. ಆದರೆ ಅದೇ ಹಳಿಯ ಮೂಲಕ ವೇಗವಾಗಿ ರೈಲು ಹಾದುಹೋದರೂ ಇಬ್ಬರೂ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ. ಈ ಮೈ ಝುಂ ಎನ್ನುವ ವಿಡಿಯೋ ನೋಡಿ ನೆಟ್ಟಿಗರು ಅಬ್ಬಬ್ಬಾ ಎಂದಿದ್ದಾರೆ.