ಮ್ಯಾರಥಾನ್ ನಲ್ಲಿ ಭಾಗವಹಿಸುವ ಮೂಲಕ ಆಸ್ಟ್ರೇಲಿಯನ್ ಮಹಿಳೆ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಎರ್ಚನಾ ಮುರ್ರೆ-ಬಾರ್ಟ್ಲೆಟ್ ಎಂಬುವವರು ಆಗಸ್ಟ್ ನಲ್ಲಿ ಕ್ವೀನ್ಸ್ ಲ್ಯಾಂಡ್ನ ಕೇಪ್ ಯಾರ್ಕ್ನಲ್ಲಿ ತಮ್ಮ ದೈನಂದಿನ ಮ್ಯಾರಥಾನ್ ದಿನಚರಿಯನ್ನು ಪ್ರಾರಂಭಿಸಿ ಡಿಸೆಂಬರ್ 3ಕ್ಕೆ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಸತತ 107 ದಿನ 107 ಮ್ಯಾರಥಾನ್ ಗಳಲ್ಲಿ ಭಾಗವಹಿಸುವ ಮೂಲಕ ಈ ಹೊಸ ಸಾಧನೆ ಮಾಡಿದ್ದಾರೆ.
ಮ್ಯಾರಥಾನ್ ಆರಂಭಿಸಿದ 107 ದಿನಗಳ ನಂತರ ಡಿಸೆಂಬರ್ 3 ರಂದು ಆಸ್ಟ್ರೇಲಿಯನ್ ಮ್ಯಾರಥಾನ್ ಮಹಿಳೆ ಎರ್ಚನಾ ಮುರ್ರೆ-ಬಾರ್ಟ್ಲೆಟ್ ಸತತವಾಗಿ ಹೆಚ್ಚು ದಿನ ಮ್ಯಾರಥಾನ್ ನಲ್ಲಿ ಓಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
32 ವರ್ಷದ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದ್ಭುತ ಸಾಧನೆಯನ್ನು ಸಾಧಿಸಿದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇದು ತನ್ನ ಮ್ಯಾರಥಾನ್ ಪ್ರಯಾಣದ ಅಂತ್ಯವಲ್ಲ ಎಂದು ಎರ್ಚನಾ ಹಂಚಿಕೊಂಡಿದ್ದು, ಮತ್ತಷ್ಟು ಸಾಧನೆ ಮಾಡುವ ಹಾದಿಯಲ್ಲಿದ್ದಾರೆ.