ವ್ಯಕ್ತಿಯೊಬ್ಬ ಆಟೋ ರಿಕ್ಷಾ ಓಡಿಸುವ ವಿಡಿಯೋ ವೈರಲ್ ಆಗಿದೆ. ಅದರ ವಿಶೇಷತೆ ಏನೆಂದರೆ ಇದು ಇಂಗ್ಲೆಂಡ್ನ ಸುಂದರ ಸ್ಥಳಗಳನ್ನು ಆಟೋದಲ್ಲಿಯೇ ಪರಿಚಯಿಸುತ್ತಾ ಚಾಲಕ ಸಾಗುತ್ತಿದ್ದಾನೆ. ಇಂಗ್ಲೆಂಡ್ನ ಯಾರ್ಕ್ನಲ್ಲಿ ಆಟೋ-ರಿಕ್ಷಾಗಳು ಅಥವಾ ಟುಕ್ಟುಕ್ಗಳನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಪ್ರಯಾಣಿಕರೊಬ್ಬರು ಒಳಗೆ ಕುಳಿತು ತೆಗೆದ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಈ ವಿಡಿಯೋ ತೆಗೆದು ಶೇರ್ ಮಾಡಿಕೊಂಡಿದ್ದಾನೆ.
ಸಾಮಾನ್ಯವಾಗಿ, ಆಟೋದಲ್ಲಿ ಪ್ರಯಾಣಿಸುವಾಗ ಟ್ರಾಫಿಕ್ ಜಾಮ್ ಮಾಮೂಲು. ಇಲ್ಲದೇ ಹೋದರೆ ಜನರು ನಿರಂತರವಾಗಿ ಹಾರ್ನ್ ಮಾಡುವುದು ಅಥವಾ ಸಿಗ್ನಲ್ ಜಂಪ್ ಮಾಡುವುದು ಮಾಮೂಲು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬ್ರಿಟಿಷ್ ಸಂಸ್ಕೃತಿಗೆ ಕೊಡುಗೆ ನೀಡುವ ಹಲವಾರು ವಾಸ್ತುಶಿಲ್ಪದ ಶ್ರೀಮಂತ ಕಟ್ಟಡಗಳನ್ನು ಕಾಣಬಹುದಾಗಿದೆ. ಸೇತುವೆಯ ಮೇಲೆ ಆಟೋ ಹಾದು ಹೋಗುತ್ತಿದ್ದು, ಅಲ್ಲಿ ಭವ್ಯವಾದ ವಾಸ್ತುಶಿಲ್ಪಗಳನ್ನು ಕಾಣಬಹುದಾಗಿದೆ.