ಫಿಫಾ ವಿಶ್ವಕಪ್ ಪಂದ್ಯಗಳು ಈಗಾಗಲೇ ಆರಂಭವಾಗಿ ಸೆಮೀಸ್ ವರೆಗೂ ಬಂದಿವೆ. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾಗೆ 4-3 ಅಂತರದ ಗೆಲುವು ಸಾಧಿಸಿದೆ. ಲುಸೈಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ಎದುರು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಗೆದ್ದಿದೆ. ಈ ತಂಡಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದವು. ಇನ್ನು ಸೆಮೀಸ್‌ನಲ್ಲಿ ಅರ್ಜೆಂಟೀನಾಗೆ ಕ್ರೊವೇಷಿಯಾ ಎದುರಾಳಿಯಾಗಿದೆ.
ಹೌದು, ನಿನ್ನೆ ತಡರಾತ್ರಿ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ತಲಾ 2-2 ಗೋಲುಗಳು ದಾಖಲು ಮಾಡಿದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅದ್ಭುತ ಆಟವಾಡುವ ಮೂಲಕ ಗೆಲುವಿಗೆ ಸಹಕರಿಸಿದರು.
ಇನ್ನು, ಲಿಯೋನೆಲ್ ಮೆಸ್ಸಿ ಆಕರ್ಷಕ ಆಟವಾಡುವ ಮೂಲಕ ನೋಡುಗರಿಗೆ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ತಮ್ಮ ತಂಡದ ಗೆಲುವಿಗೆ ಸಹಕರಿಸಿದರು. ಶೂಟೌಟ್‌ನಲ್ಲಿ ಕ್ರೊವೇಷಿಯಾ 4 ಗೋಲು ಬಾರಿಸಿದರೆ, ಬ್ರೆಜಿಲ್ ಕೇವಲ 2 ಗೋಲು ಗಳಿಸಿತು. ಬ್ರೆಜಿಲ್ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದಿದೆ.