alex Certify ತಮಾಷೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಾಷೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ತಮಾಷೆ ಕೂಡ ಕೆಲವೊಮ್ಮೆ ಅಪಾಯ ತಂದೊಡ್ಡುತ್ತವೆ. ಅದು ಮನುಷ್ಯರೊಂದಿಗೆ ಮಾಡುವ ತಮಾಷೆಯೇ ಆಗಿರಬಹುದು ಅಥವಾ ಪ್ರಾಣಿಗಳೊಂದಿಗೆ ಮಾಡುವ ಕೀಟಲೆಯೇ ಇರಬಹುದು. ಇದು ಸ್ವಲ್ವ ಜಾಸ್ತಿಯಾಯ್ತು ಅನ್ನೋ ರೀತಿ ಉದ್ಘರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ವ್ಯಕ್ತಿಯೊಬ್ಬ ಮೊಸಳೆಯಂತೆ ವೇಷ ಧರಿಸಿ ಮೊಸಳೆಯ ಜೊತೆ ಆಟವಾಡಿದ್ದಾನೆ. ಕೊಳದ ದಡದಲ್ಲಿ ಮೊಸಳೆಯೊಂದು ಇದ್ದು ಅದರ ಪಕ್ಕದಲ್ಲೇ ವ್ಯಕ್ತಿಯೊಬ್ಬ ಮೊಸಳೆಯಂತೆ ವೇಷ ಧರಿಸಿಕೊಂಡು ಮೊಸಳೆಯಂತೆ ನಟಿಸುತ್ತಾ, ಮೊಸಳೆಯ ದೇಹದ ಮೇಲೆ ಕೈಯಾಡಿಸುತ್ತಾ ಆಟವಾಡಿದ್ದಾನೆ. ಆತ ಪದೇ ಪದೇ ಕೀಟಲೆ ಮಾಡುವ ಮೂಲಕ ವ್ಯಕ್ತಿಯೊಬ್ಬ ತನ್ನ ಜೀವವನ್ನು ಹೇಗೆ ಅಪಾಯಕ್ಕೊಡ್ಡಿದ್ದಾನೆ ಎಂಬುದನ್ನು ತೋರಿಸಿದೆ.

ಈ ವಿಡಿಯೋ ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಸಾಯಲು ಸೃಜನಾತ್ಮಕ ಮಾರ್ಗ ಎಂದು ವ್ಯಕ್ತಿಯ ನಡೆಯನ್ನು ಟೀಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...