100 ಮಂದಿ ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕನಿಷ್ಠ 100 ಪುರುಷರು ಆಕೆಯ ಮನೆಗೆ ನುಗ್ಗಿ ಬಲವಂತವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಪಹರಣಕ್ಕೊಳಗಾದ ಯುವತಿಯನ್ನು ವೈಶಾಲಿ ಎಂದು ಗುರುತಿಸಲಾಗಿದೆ. ಮಹಿಳೆಯ ಪೋಷಕರ ಪ್ರಕಾರ ಸುಮಾರು 100 ಪುರುಷರು ಅವರ ಮನೆಗೆ ನುಗ್ಗಿ , ಮನೆಯನ್ನು ಧ್ವಂಸಗೊಳಿಸಿ ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುರುಷರು ಯುವತಿಯ ಸಂಬಂಧಿಕರಿಗೆ ಥಳಿಸುವ ದೃಶ್ಯ ಕಂಡು ಬರುತ್ತದೆ.ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.