ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಬಯಸ್ತಾಳೆ. ಆ ದಿನವನ್ನು ಮತ್ತಷ್ಟು ಖುಷಿಯಾಗಿಡಲು ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡ್ತಾಳೆ. ಗರ್ಭಿಣಿಯಾದವಳು ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಿದ್ರೆ ಬಹಳ ಒಳ್ಳೆಯದು. ಮನೆಗೆ ಬರುವ ಮಗು ಬುದ್ಧಿವಂತ ಹಾಗೂ ಸುಂದರವಾಗಿರಲು ಇದು ನೆರವಾಗುತ್ತದೆ.
ಗರ್ಭಿಣಿಯಾದವಳು ವಾಯುವ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬಾರದು.
ನೈರುತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗುವುದು ಬಹಳ ಒಳ್ಳೆಯದು. ಇದು ಸಾಧ್ಯವಾಗದಿದ್ದಲ್ಲಿ ಈಶಾನ್ಯ ದಿಕ್ಕಿನ ಕೋಣೆಯನ್ನು ಬಳಸಬಹುದು.
ಗರ್ಭಿಣಿ ಇರುವ ಕೋಣೆ ತಿಳಿ ನೀಲಿ, ನೀಲಿ, ಹಳದಿ, ಬಿಳಿ, ತಿಳಿ ಗುಲಾಬಿ ಬಣ್ಣದಲ್ಲಿರಲಿ. ಗೋಡೆಯ ಬಣ್ಣ ಕಪ್ಪು, ಕಿತ್ತಳೆ, ಕೆಂಪು ಬಣ್ಣದಲ್ಲಿರದಂತೆ ನೋಡಿಕೊಳ್ಳಿ.
ಸಕಾರಾತ್ಮಕ ಪುಸ್ತಕವನ್ನು ಓದಬೇಕು. ಒಳ್ಳೆಯ ಟಿವಿ ಕಾರ್ಯಕ್ರಮಗಳನ್ನು ನೋಡಬೇಕು. ಒಳ್ಳೊಳ್ಳೆ ಮಾತುಗಳನ್ನು ಆಡಬೇಕು. ಮಲಗುವ ಕೋಣೆಯಲ್ಲಿ ಮಕ್ಕಳ ಫೋಟೋ ಹಾಕಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸಿದಲ್ಲಿ ಬುದ್ಧಿವಂತ ಹಾಗೂ ಸುಂದರ ಮಕ್ಕಳು ಹುಟ್ಟುತ್ತಾರೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.