ಚಿಕ್ಕ ಮಗುವೊಂದು ಹಾವನ್ನು ಸ್ಪರ್ಶಿಸುವ ಭಯಾನಕ ವಿಡಿಯೋ ವೈರಲ್ ಆಗಿದೆ. ಇದು ಯಾವ ಹಾವು, ವಿಷಪೂರಿತ ಹೌದೋ ಅಲ್ಲವೋ ತಿಳಿದಿಲ್ಲ. ಆದರೆ ಬಾಲಕನಿಗೆ ಇದು ಹಾವು ಎಂಬುದು ವಿಷಸರ್ಪ ಎನ್ನುವ ಅರಿವು ಇಲ್ಲದೇ ಅದರ ಬಾಲವನ್ನು ಹಿಡಿದುಕೊಂಡು ಎಳೆದಾಡುವ ದೃಶ್ಯ ನೋಡುಗರನ್ನು ಭಯಗೊಳಿಸುತ್ತದೆ.
ನವೆಂಬರ್ 4 ರಂದು ಹಂಚಿಕೊಂಡ ಇನ್ಸ್ಟಾಗ್ರಾಮ್ ರೀಲ್ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋದಲ್ಲಿ ಮಗು ಹಾವನ್ನು ಹಿಡಿದುಕೊಂಡಿದ್ದರೂ ಅಲ್ಲಿದ್ದವರು ಅದನ್ನು ನೋಡಿ ನಗುವುದು, ತಮಾಷೆ ಮಾಡುವುದು ಮಾಡುತ್ತಿದ್ದರೇ ವಿನಾ ಯಾರೊಬ್ಬರೂ ಅದನ್ನು ದೂರ ಸರಿಸುವ ಯೋಚನೆ ಮಾಡಲಿಲ್ಲ. ಇದಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ.
ಹಾವು ಒಂದು ಸಲ ಬಾಲಕನ ಮುಖದ ಸಮೀಪ ಬಂದಾಗ ಆತ ವಿಚಲಿತನಾಗಿರುವಂತೆ ಕಾಣಿಸಿತು. ಕೊನೆಗೆ ಏನಾಯಿತು ಎಂದು ವಿಡಿಯೋದಲ್ಲಿ ಕಾಣಿಸಲಿಲ್ಲ. ಅರ್ಧಕ್ಕೆ ವಿಡಿಯೋ ಕಟ್ಟಾಗಿದ್ದು, ಏನೋ ಅನಾಹುತ ಆಗಿರಬೇಕು ಎಂದು ನೆಟ್ಟಿಗರು ಭಾವಿಸುತ್ತಿದ್ದಾರೆ. ದೊಡ್ಡವರು ತಮಾಷೆ ನೋಡುತ್ತಿರುವುದಕ್ಕೆ ಜನರು ಕಮೆಂಟ್ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.