alex Certify ಕನ್ಯಾದಾನ ನಿರಾಕರಿಸಿದ ವಧು; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ಯಾದಾನ ನಿರಾಕರಿಸಿದ ವಧು; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಬಹುತೇಕ ಮಂದಿಗೆ ಡಿಫರೆಂಟ್​ ಆಗಿ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಅಂಥ ಕೆಲವು ವಿಭಿನ್ನ ಮದುವೆಗಳು ವೈರಲ್​ ಕೂಡ ಆಗುತ್ತವೆ. ಕನ್ಯಾದಾನವನ್ನು ನಿರಾಕರಿಸಿದ ವಧುವಿನ ಪೋಸ್ಟ್​ ಒಂದು ಇದೀಗ ವೈರಲ್​ ಆಗುತ್ತಿದೆ.

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ @keepitrustic ಎಂಬುವವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ತಾವು ಮದುವೆಯ ಸಮಯದಲ್ಲಿ ಕನ್ಯಾದಾನವನ್ನು ಹೇಗೆ ನಿರಾಕರಿಸಿದೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ.

ಪ್ರತಿ ಭಾರತೀಯ ವಿವಾಹದಲ್ಲಿ ಕನ್ಯಾದಾನದ ಆಚರಣೆ ನಡೆಯುತ್ತದೆ. ಅಲ್ಲಿ ವಧುವಿನ ತಂದೆ ತನ್ನ ಮಗಳ ಕೈಯನ್ನು ತೆಗೆದುಕೊಂಡು ವರನ ಕೈಯಲ್ಲಿ ಇರಿಸಿ, ತನ್ನ ಮಗಳನ್ನು ತನ್ನ ಸಮಾನ ಸಂಗಾತಿಯಾಗಿ ಸ್ವೀಕರಿಸಲು ವಿನಂತಿಸುತ್ತಾನೆ.

ಈ ಆಚರಣೆಯು ವಧುವಿನ ತಂದೆಯ ಸ್ವೀಕಾರ ಮತ್ತು ಅವರ ಮಗಳನ್ನು ಬಿಟ್ಟುಕೊಡಲು ಅಧಿಕೃತ ಅನುಮೋದನೆ ಎರಡನ್ನೂ ಸೂಚಿಸುತ್ತದೆ. ಆದರೆ ತನ್ನ ಮದುವೆಯಲ್ಲಿ ಕನ್ಯಾದಾನ ಇರಲಿಲ್ಲ ಎಂದು ಮದುಮಗಳು ಹೇಳಿದ್ದಾರೆ.

“ನನ್ನ ಮದುವೆಯಲ್ಲಿ ಕನ್ಯಾದಾನ ಇರಲಿಲ್ಲ. ಹೆಣ್ಣು ಮಗುವನ್ನು ಒಂದು ಮನೆತನದಿಂದ ಇನ್ನೊಂದು ಮನೆತನಕ್ಕೆ ವರ್ಗಾಯಿಸುವುದು ನನಗೆ ಇಷ್ಟ ಇರಲಿಲ್ಲ. ಅದಕ್ಕೆ ಕನ್ಯಾದಾನ ಮಾಡಲಿಲ್ಲ“ ಎಂದಿದ್ದಾರೆ.

ನೆಟ್ಟಿಗರು ವಧುವಿನ ಬಲವಾದ ಇಚ್ಛಾಶಕ್ತಿಯ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಮಾನತೆಯನ್ನು ತರಲು ಇಂತಹ ಕ್ರಮಗಳು ಹೇಗೆ ಅಗತ್ಯವೆಂದು ಹಲವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...