‘ಆಶಿಕಿ’ ಖ್ಯಾತಿಯ ನಟಿ ಅನು ಅಗರ್ವಾಲ್ ಒಮ್ಮೆ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ಕೊರೆಯುವ ಚಳಿಯಲ್ಲಿ ವಾಸಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ ?
ಅವರ ಇತ್ತೀಚಿನ ಸಂದರ್ಶನದಲ್ಲಿ ಗ್ಲಾಮರ್ ಬದುಕಿನಿಂದ ಹೊರಗಿದ್ದ ಬಗ್ಗೆ ತಿಳಿಸಿದ್ದಾರೆ. ಬಣ್ಣದ ಬದುಕಿನಿಂದ ದೂರವಾಗಿ ಸನ್ಯಾಸಿಯಾಗಿದ್ದ ತಮ್ಮ ಜೀವನದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ನಾನು ಸನ್ಯಾಸಿಯಾಗಿದ್ದಾಗ 5 ಡಿಗ್ರಿ ತಾಪಮಾನದಲ್ಲಿ ವಾಸಿಸುತ್ತಿದ್ದೆ. ಗೀಸರ್ ಇರಲಿಲ್ಲ. ನನ್ನ ಬಳಿ ಎರಡು ಸೆಟ್ ಬಟ್ಟೆಗಳು ಮತ್ತು ಒಂದು ಸ್ವೆಟರ್ ಇರುವ ಒಂದು ಬ್ಯಾಗ್ ಮಾತ್ರ ಇತ್ತು. ನಾನು ಆ ಬಟ್ಟೆಗಳಲ್ಲೇ ಹಲವು ವರ್ಷಗಳನ್ನು ಕಳೆದಿದ್ದೇನೆ. ಸನ್ಯಾಸಿನಿಯಾಗಿದ್ದ ವೇಳೆ ಮೊದಲ ಕ್ಲಾಸ್ ಮುಂಜಾನೆ 4:30 ಕ್ಕೆ ಇರುತ್ತಿತ್ತು. ಅದಕ್ಕಾಗಿ ನಾವು ಎದ್ದು ಸ್ನಾನ ಮಾಡಿ ಬಟ್ಟೆ ಒಗೆದು ಒಣಗಲು ನೇತು ಹಾಕಬೇಕಾಗಿತ್ತು. ನಾನು 2:30 ಕ್ಕೆ ಎಚ್ಚರಗೊಳ್ಳುತ್ತಿದ್ದೆ ಆದ್ದರಿಂದ ನಾನು ಈ ಎಲ್ಲಾ ಕಾರ್ಯಗಳನ್ನು ಮೊದಲು ಮಾಡಿ ಮುಗಿಸುತ್ತಿದ್ದೆ ಎಂದಿದ್ದಾರೆ.
ನಾವು ತಣ್ಣೀರಿನಲ್ಲಿ ಸ್ನಾನ ಮಾಡುತ್ತೇವೆ ನನ್ನ ಬಟ್ಟೆಗಳನ್ನು ತಣ್ಣೀರಿನಲ್ಲಿ ಒಗೆಯುತ್ತೇವೆ. ತಿಂಗಳುಗಟ್ಟಲೆ ನನ್ನ ಕೈಕಾಲು ಹೆಪ್ಪುಗಟ್ಟಿತ್ತು. ನಾನು ಕೇಶಮುಂಡನ ಮಾಡಿಸಿಕೊಂಡಿದ್ದರಿಂದ ಇದ್ದ ಒಂದೇ ಒಂದು ಉಣ್ಣೆಯ ಕ್ಯಾಪ್ ಧರಿಸುತ್ತಿದ್ದೆ. ಆದರೆ ಇಷ್ಟೆಲ್ಲ ಆದ ನಂತರ ಇಡೀ ದಿನ ತುಂಬಾ ಶಾಂತಿಯುತವಾಗಿತ್ತು ಎಂದಿದ್ದಾರೆ.