ಜನರು ತಮ್ಮ ಅದೃಷ್ಟ ಬದಲಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಗೋಡೆ ಮೇಲೆ ನೇತು ಹಾಕಿದ ಚಿತ್ರವೊಂದು ನಿಮ್ಮ ಅದೃಷ್ಟ ಬದಲಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಚಿತ್ರಗಳು ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.
ಧನಾತ್ಮಕ ಶಕ್ತಿ ವೃದ್ಧಿಗಾಗಿ ಮನೆಯಲ್ಲಿ ಮಕ್ಕಳು ನಗುವ ಫೋಟೋವನ್ನು ಹಾಕಬೇಕು.
ಹೂಗಳ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಇಡಬೇಕು. ಇದ್ರಿಂದ ತಾಜಾತನ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ.
ಕುದುರೆಗಳು ಮತ್ತು ನಾಯಿಗಳ ಚಿತ್ರಗಳನ್ನು ಮನೆಯಲ್ಲಿ ಇಡಬೇಕು. ಅವು ನಿಮಗೆ ಶಕ್ತಿ ಮತ್ತು ಪ್ರಗತಿಯನ್ನು ನೀಡುತ್ತವೆ.
ಮನೆಯಲ್ಲಿ ಹರಿಯುವ ನೀರು ಅಥವಾ ಜಲಪಾತಗಳ ಚಿತ್ರಗಳನ್ನು ಹಾಕಬೇಡಿ. ಅವು ಹಣದ ನಷ್ಟಕ್ಕೆ ಕಾರಣವಾಗುತ್ತವೆ.
ಮನೆಯ ಗೋಡೆಯ ಮೇಲೆ ಕಪ್ಪು ಚಿತ್ರಗಳನ್ನು ಹಾಕಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುವಂತೆ ಮಾಡುತ್ತದೆ.