ಆಗಾಗ್ಗೆ ಪ್ರಾಣಿ, ಪಕ್ಷಿ ಪ್ರಪಂಚದ ಅಪರೂಪದ ದೃಶ್ಯಗಳನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇದೀಗ ಅಪರೂಪದ ಸ್ವರನ್ ಮೃಗ್ (ಬಾರ್ಕಿಂಗ್ ಜಿಂಕೆ) ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
ನೋಡಲು ಸುಂದರವಾಗಿಯೂ, ಕುತೂಹಲಕರವಾಗಿರುವ ಇರುವ ಈ ಸ್ವರನ್ ಮೃಗ್ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಜಿಂಕೆಯು ಬೊಗಳುವ (ಬಾರ್ಕಿಂಗ್) ಜಿಂಕೆ ಎಂಬ ಉಪಜಾತಿಗೆ ಸೇರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂಟ್ಜಾಕ್ ಎಂದೂ ಕರೆಯಲ್ಪಡುವ, ಬಾರ್ಕಿಂಗ್ ಜಿಂಕೆಗಳು ಪಕ್ಕೆಲುಬಿನ ಮುಖದ ರಚನೆಯನ್ನು ಹೊಂದಿವೆ ಮತ್ತು ಅವು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿವೆ.
ಅಪಾಯವನ್ನು ಗ್ರಹಿಸಿದ ತಕ್ಷಣ ಇವು ಬೊಗಳುತ್ತವೆ. ಇದರಿಂದಾಗಿ ಇವುಗಳಿಗೆ ‘ಬಾರ್ಕಿಂಗ್ ಡೀರ್’ ಎಂದು ಹೆಸರು ಬಂದಿದೆ. “ಸ್ವರನ್ ಮೃಗ್ ಹೆಸರಿಗೆ ತಕ್ಕಂತೆ ದೇವತೆಗಳನ್ನೂ ಆಕರ್ಷಿಸಿದ ಸೌಂದರ್ಯ“ ಎಂದು ಹೇಳಲಾಗಿದೆ. ಅಪರೂಪವಾಗಿ ಕಾಣಸಿಗುವ ಈ ಜಿಂಕೆಯನ್ನು ಎಲ್ಲರೂ ನೋಡಲಿ ಎನ್ನುವ ಆಸೆಯಿಂದ ಶೇರ್ ಮಾಡಿಕೊಳ್ಳಲಾಗಿದೆ ಎಂದು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಅಧಿಕಾರಿ ಪರ್ವೀನ್ ಕಸ್ವಾನ್.