ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಧರ್ಮ, ಜನಾಂಗ, ಪ್ರದೇಶ, ಭಾಷೆ ಕೋಮು ಭಾವನೆ ಕೆರಳಿಸುವ ಸಂಸ್ಥೆ ಮತ್ತು ಸಂಘಟನೆಗಳೊಂದಿಗೆ ಸೇರದಂತೆ ನಿರ್ಬಂಧ ವಿಧಿಸಲು ಸರ್ಕಾರ ನಿರ್ಧರಿಸಿದೆ. ಆಸ್ತಿ ವಿವರ ಸಲ್ಲಿಕೆ ಅವಧಿ ಮಾರ್ಚ್ 31 ಕ್ಕೆ ನಿಗದಿ ಮಾಡಲು ಕ್ರಮಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರು ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಮಾಹಿತಿಯನ್ನು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಪ್ರಸ್ತುತ ಇರುವ ಸೇವಾ ನಿಯಮದ ಪ್ರಕಾರ ಡಿಸೆಂಬರ್ 31ರೊಳಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕಿದೆ. ಆದಾಯ ತೆರಿಗೆ ಪಾವತಿಗೆ ಮಾರ್ಚ್ 31 ಪರಿಗಣಿಸುವುದರಿಂದ ಸರ್ಕಾರಿ ನೌಕರರಿಗೂ ಆಸ್ತಿ ವಿವರ ಸಲ್ಲಿಕೆ ಅವಧಿಯನ್ನು ಮಾರ್ಚ್ 31ಕ್ಕೆ ಪರಿಗಣಿಸಬೇಕೆಂಬ ಸಲಹೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಯನ್ನು ಮಾರ್ಚ್ 31ಕ್ಕೆ ಪರಿಗಣಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.