
ನಾಯಿಗೆ ಸಹಾಯ ಮಾಡಲು ವಿದ್ಯಾರ್ಥಿಯೊಬ್ಬ ಚರಂಡಿಯೊಳಗೆ ಪ್ರವೇಶಿಸಿದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ನಿಸ್ವಾರ್ಥ ಕಾರ್ಯಕ್ಕಾಗಿ ಆನ್‌ಲೈನ್‌ನಲ್ಲಿ ಪ್ರಶಂಸೆ ಗಳಿಸಿದ್ದಾರೆ.
ಟ್ವಿಟರ್ ಬಳಕೆದಾರ ಗುಲ್ಜಾರ್ ಸಾಹೇಬ್ ಅವರು ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ವಿದ್ಯಾರ್ಥಿಗಳು, ಛತ್ರಿ ಹಿಡಿದುಕೊಂಡು ರಸ್ತೆಬದಿಯಲ್ಲಿ ಮಳೆಯಲ್ಲಿ ನಿಂತಿರುವುದನ್ನು ತೋರಿಸುತ್ತದೆ.
ಅವರಲ್ಲಿ ಇಬ್ಬರು ಚರಂಡಿಯೊಳಗೆ ಇಣುಕಿ ನೋಡುತ್ತಿದ್ದರೆ ಇತರರು ದೂರ ಹೋಗುತ್ತಾರೆ. ಯುವಕ, ತನ್ನ ಕಾಲೇಜ್ ಬ್ಯಾಗ್ ನ ಹೆಗಲ ಮೇಲೆ ಹಾಕಿಕೊಂಡು, ಸುರಿಯುತ್ತಿರುವ ಮಳೆಯ ನಡುವೆ ಚರಂಡಿಯೊಳಗೆ ಇಳಿಯುತ್ತಾನೆ.
ನಾಯಿ ಮಳೆ ನೀರಲ್ಲಿ ನೆನೆಯದಂತೆ ಅದಕ್ಕೆ ಛತ್ರಿಯ ಆಸರೆ ನೀಡುತ್ತಾರೆ. ನಂತರ ಅವರು ನಾಯಿಯೊಂದಿಗೆ ರಸ್ತೆ ದಾಟುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.