alex Certify ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್ ರಾಜಕಾರಣ; ‘ಫ್ಲೈಟ್’ ನಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್ ರಾಜಕಾರಣ; ‘ಫ್ಲೈಟ್’ ನಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು

ಈವರೆಗೆ ಕೇವಲ ಶಾಸಕರು ಮತ್ತು ಪಾಲಿಕೆ ಸದಸ್ಯರ ಮಟ್ಟದಲ್ಲಿ ಕೇಳಿ ಬರುತ್ತಿದ್ದ ರೆಸಾರ್ಟ್ ರಾಜಕೀಯ, ಈಗ ಗ್ರಾಮ ಪಂಚಾಯಿತಿಗೂ ಕಾಲಿಟ್ಟಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಲುವಾಗಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದ ಸದಸ್ಯರು ವಿಮಾನದಲ್ಲಿ ಬಂದು ಈಗ ನಿರ್ಣಯ ಮಂಡನೆ ಮಾಡಿದ್ದಾರೆ.

ಇಂಥದೊಂದು ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದು, ಇಲ್ಲಿನ 9 ಮಂದಿ ಸದಸ್ಯರು ಕಳೆದ 40 ದಿನಗಳಿಂದ ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿದ್ದರು. ಎದುರಾಳಿಗಳು ತಮ್ಮ ಸದಸ್ಯರನ್ನು ಸೆಳೆಯಬಹುದು ಎಂಬ ಕಾರಣಕ್ಕೆ ಇವರುಗಳನ್ನು ರೆಸಾರ್ಟ್ ನಲ್ಲಿ ಇರಿಸಲಾಗಿತ್ತು.

ಇದೀಗ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದ ಈ ಒಂಬತ್ತು ಸದಸ್ಯರು ಮಂಗಳವಾರದಂದು ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತೇಶ ನಾಯರ್ ತಮ್ಮ ಆಯ್ಕೆಯ ಸಂದರ್ಭದಲ್ಲಿ 15 ತಿಂಗಳ ಬಳಿಕ ಮತ್ತೊಬ್ಬ ಸದಸ್ಯ ಸುರೇಶ್ ತಳಗೇರಿ ಅವರಿಗೆ ಸ್ಥಾನ ಬಿಟ್ಟು ಕೊಡುವ ವಾಗ್ದಾನ ನೀಡಿದ್ದರಂತೆ. ಆದರೆ ಇದನ್ನು ಪಾಲಿಸದ ಕಾರಣ ಇದೀಗ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...