2 ಕಪ್- ಮೈದಾ, 1 ಟೀ ಸ್ಪೂನ್- ಬೇಕಿಂಗ್ ಪೌಡರ್, ¼ ಟೀ ಸ್ಪೂನ್- ಬೇಕಿಂಗ್ ಸೋಡಾ, 8 ಟೇಬಲ್ ಸ್ಪೂನ್- ಬೆಣ್ಣೆ, 1 ಕಪ್-ಸಕ್ಕರೆ ಪುಡಿ, ಕ್ರೀಂ ಚೀಸ್-5 ಪೀಸ್, 1 ಮೊಟ್ಟೆ, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, 5 ಹನಿ-ಹಳದಿ ಫುಡ್ ಕಲರ್,
ಮಾಡುವ ವಿಧಾನ:
ಒಂದು ಬೌಲ್ ಗೆ ಮೈದಾ, ಬೇಕಿಂಗ್ ಪೌಡರ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಬೆಣ್ಣೆ, ಕ್ರೀಂ ಚೀಸ್, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಮೊಟ್ಟೆ ಒಡೆದು ಹಾಕಿ ಹಾಗೇ ಲಿಂಬೆಹಣ್ಣಿನ ರಸ, ವೆನಿಲ್ಲಾ ಎಸೆನ್ಸ್, ಫುಡ್ ಕಲರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮೈದಾ ಅನ್ನು ಇದಕ್ಕೆ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ. ಈ ಮಿಶ್ರಣದ ಬೌಲ್ ಗೆ ಒಂದು ಪ್ಲಾಸ್ಟಿಕ್ ಕವರ್ ಸುತ್ತಿ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ನಂತರ ಒವನ್ ಅನ್ನು ಫ್ರಿ ಹೀಟ್ ಮಾಡಿಕೊಂಡು ಈ ಕುಕ್ಕೀಸ್ ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ರೀತಿ ಕಟ್ಟಿ ನಿಧಾನಕ್ಕೆ ಒತ್ತಿ. ಬೇಕಿಂಗ್ ಟ್ರೆ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ.