ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ.
ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಬೇವಿನ ಎಲೆಗಳನ್ನು ಬಳಸುವ ವಿಚಾರ ನಿಮಗೆಲ್ಲಾ ತಿಳಿದೇ ಇದೆ. ನಿತ್ಯ ಬೇವಿನ ಎಲೆಗಳನ್ನು ಸೇವಿಸುವುದರಿಂದ ಚರ್ಮದ ಮೇಲಿನ ಕಲೆ, ಗುಳ್ಳೆ ಮತ್ತು ಮಚ್ಚೆಗಳು ಇಲ್ಲವಾಗುತ್ತದೆ. ಯಾವುದೇ ಸೋಂಕಿನ ಕಲೆಗಳನ್ನು ಹೋಗಲಾಡಿಸುವ ಗುಣ ಈ ಎಲೆಗಳಿಗಿವೆ.
ಬೇವಿನ ಎಲೆಗಳು ರಕ್ತ ಸಂಚಾರವನ್ನು ಉತ್ತಮಗೊಳಿಸಿ ಅ ನಾಳಗಳನ್ನು ಹಿಗ್ಗಿಸುತ್ತವೆ. ದೇಹದ ಇನ್ಸುಲಿನ್ ಅಗತ್ಯವನ್ನು ಬೇವಿನ ಎಲೆಗಳು ಕಡಿಮೆ ಮಾಡುತ್ತವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ರಕ್ತದ ಗ್ಲುಕೋಸ್ ಅಂಶವನ್ನು ಕಡಿಮೆ ಮಾಡಿ ಸಕ್ಕರೆ ಪ್ರಮಾಣವನ್ನು ತಗ್ಗಿಸುವ ಗುಣ ಇದಕ್ಕಿದೆ.
ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ ಮಾತ್ರವಲ್ಲ ಸೊಂಟದ ಭಾಗದ ಕೊಬ್ಬು ಕಡಿಮೆಯಾಗುತ್ತದೆ. ಬಾಯಿಯ ವಾಸನೆ, ವಸಡಿನ ರಕ್ತ ಸೋರುವಿಕೆ ನಿವಾರಣೆ ಆಗುತ್ತದೆ.