ಸಿಂಹದ ಜೊತೆ ನಡೆಯೋದಿರಲಿ, ಅದರ ಎದುರು ನಿಲ್ಲೋಕೂ ಭಯ. ಆದ್ರೆ ಮಹಿಳೆಯೊಬ್ಬಳು ಮೂರು ಸಿಂಹಗಳ ಜೊತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮೂರು ಸಿಂಹಗಳೊಂದಿಗೆ ಮಹಿಳೆ ನಡೆಯುತ್ತಿದ್ದರೂ ಆಕೆ ಸ್ವಲ್ಪವೂ ಹೆದರಲಿಲ್ಲ.
ಇನ್‌ಸ್ಟಾಗ್ರಾಮ್‌ನಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಜೆನ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಹಿಳೆ ಸಿಂಹಗಳೊಂದಿಗೆ ನಡೆದುಕೊಂಡು ಹೋಗುತ್ತಿರುವ ವೀಡಿಯೊ 6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈ ವಿಡಿಯೋ ನೋಡಿದ ಹಲವರು , ಈ ಮೂರು ಸಿಂಹಗಳು ಮಹಿಳೆಯೊಂದಿಗೆ ನಡೆyಲು ಅವಳು ತುಂಬಾ ವಿಶೇಷವಾದ ವ್ಯಕ್ತಿಯಾಗಿರಬೇಕು ಎಂದು ಹೇಳಿದ್ದಾರೆ.
ಕೆಲವರು ಯಾವುದೇ ಕ್ಷಣದಲ್ಲಿ ಆ ಸಿಂಹಗಳು ತಿರುಗಬಹುದು ಮತ್ತು 1 ಸೆಕೆಂಡಿನಲ್ಲಿ ನಿಮ್ಮನ್ನು ಅರ್ಧದಷ್ಟು ಸೀಳಬಹುದು ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.
https://www.instagram.com/reel/Ck1eff4JxM5/?utm_source=ig_embed&ig_rid=b2073337-3875-4e51-ae37-180bd83dbec4