ಮನುಷ್ಯರಷ್ಟೇ ಬುದ್ಧಿವಂತರಲ್ಲ, ಪ್ರಾಣಿಗಳಲ್ಲೂ ಕೂಡ ತುಂಬಾ ಬುದ್ಧಿವಂತಿಕೆ ಇದೆ. ಅಂತಹ ವಿಡಿಯೋವೊಂದನ್ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬುದ್ಧಿವಂತ ಆನೆಯೊಂದು ವಿದ್ಯುತ್ ಬೇಲಿಯನ್ನು ಹೇಗೆ ಚಾಣಾಕ್ಷತನದಿಂದ ದಾಟುತ್ತದೆ ಎಂಬುದಿದೆ.
ವೀಡಿಯೋದಲ್ಲಿ ಆನೆಯು ವಿದ್ಯುತ್ ತಂತಿಗಳನ್ನು ಲಘುವಾಗಿ ಸ್ಪರ್ಶಿಸುವ ಮೂಲಕ ತಾನು ವಿದ್ಯುತ್ ಆಘಾತಕ್ಕೆ ಒಳಗಾಗುತ್ತೇನಾ ಎಂದು ಮೊದಲು ತನ್ನ ಕಾಲಿನಿಂದ ಪರೀಕ್ಷಿಸುತ್ತದೆ. ವಿದ್ಯುಚ್ಛಕ್ತಿಯ ಹರಿವನ್ನು ಪರಿಶೀಲಿಸಿದ ನಂತರ ತಂತಿಗಳಿಗೆ ಆಧಾರವಾಗಿದ್ದ ಮರದ ಕಂಬವನ್ನು ಕೆಳಗೆ ತಳ್ಳುತ್ತದೆ. ಮರದ ಕಂಬ ಕೆಳಗೆ ಬಿದ್ದ ನಂತರ ಸುಲಭವಾಗಿ ಆನೆ ತಂತಿಕಂಬಿಯನ್ನು ದಾಟಿ ರಸ್ತೆಗೆ ಬರುತ್ತದೆ.
“ನಾವು ತುಂಬಾ ಬುದ್ಧಿವಂತರು !! ಈ ಆನೆ ಹೇಗೆ ಚಾಕಚಕ್ಯತೆಯಿಂದ ವಿದ್ಯುತ್ ಬೇಲಿಯನ್ನು ಒಡೆಯುತ್ತಿದೆ ನೋಡಿ. ತಾಳ್ಮೆಯಿಂದ” ಎಂಬ ಶೀರ್ಷಿಕೆಯೊಂದಿಗೆ ಪರ್ವೀನ್ ಕಸ್ವಾನ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇದು 2019 ರ ಹಳೆಯ ಕ್ಲಿಪ್ ಆಗಿದ್ದು ಅದು ಮತ್ತೊಮ್ಮೆ ಇಂಟರ್ನೆಟ್ನ ಗಮನವನ್ನು ಸೆಳೆದಿದೆ. ಇದು ಇಲ್ಲಿಯವರೆಗೆ 65 ಸಾವಿರ ವೀಕ್ಷಣೆಗಳನ್ನು ಹೊಂದಿದೆ.
https://twitter.com/ParveenKaswan/status/1599730642769481728?ref_src=twsrc%5Etfw%7Ctwcamp%5Etweetembed%7Ctwterm%5E1599730642769481728%7Ctwgr%5E3c76dafb91fbf07e5c556239fa18602e2dac853c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felephant-breaks-electric-fence-using-a-brilliant-technique-old-video-goes-viral-2305810-2022-12-06