ಬೆಂಗಳೂರಿನ ಏರ್ ಬಿಎನ್ಬಿಯಲ್ಲಿ ಒಂದು ರೂಪಾಯಿ ಸಾಮಗ್ರಿಗೂ ಕ್ಯೂಆರ್ ಕೋಡ್….! 06-12-2022 3:31PM IST / No Comments / Posted In: Karnataka, Latest News, Live News ಎಲ್ಲಿಯಾದರೂ ಪ್ರಯಾಣಿಸುವಾಗ, ಅಲ್ಲಲ್ಲಿ ಹಲವು ತಿನಿಸುಗಳುಳ್ಳ ಮಿನಿ ಬಾರ್ಗಳನ್ನು ನೋಡಬಹುದು. ಆದರೆ ಇದನ್ನು ಮುಟ್ಟಲು ಕೂಡ ಹಲವರು ಹೆದರುತ್ತಾರೆ. ಏಕೆಂದರೆ ಇದರಲ್ಲಿ ಪ್ರದರ್ಶಿಸಲಾದ ವಸ್ತುಗಳ ಬೆಲೆ ತೀರಾ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ ಅವುಗಳಲ್ಲಿ ಕೆಲವೊಂದು ವಸ್ತುಗಳು ಡೇಟ್ಬಾರ್ ಕೂಡ ಆಗಿರುತ್ತವೆ. ಆದ್ದರಿಂದ ಇದನ್ನು ನೋಡಿ ನಿರಾಸಕ್ತಿ ತೋರುವವರೇ ಜಾಸ್ತಿ. ಈಗ ಇಂಥದ್ದೇ ಒಂದು ಸುದ್ದಿ ಭಾರಿ ವೈರಲ್ ಆಗಿದೆ. ಅದು ಬೆಂಗಳೂರಿನ ಏರ್ಬಿಎನ್ಬಿಯದ್ದು. ಬೆಂಗಳೂರಿನಲ್ಲಿ ಮಳಿಗೆ ಹಾಕಿರುವ ಏರ್ಬಿಎನ್ಬಿ ತನ್ನ ಪ್ರತಿಯೊಂದು ವಸ್ತುಗಳಿಗೂ ಕ್ಯೂಆರ್ ಕೋಡ್ ಹಾಕಿದೆ. ಅದರ ಮೇಲೆ ಸ್ಕ್ಯಾನ್ ಮಾಡಿ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬಹುದು. ಅದು ಎಷ್ಟರಮಟ್ಟಿಗೆ ಎಂದರೆ ಒಂದು ರೂಪಾಯಿಯ ಸಾಮಗ್ರಿಯಿಂದ ಹಿಡಿದು, ಒಂದೇ ಒಂದು ಬಿಸ್ಕೆಟ್ ಬೇಕಾದರೂ ಇಲ್ಲಿ ಖರೀದಿ ಮಾಡಬಹುದು. ಆದರೆ ಎಲ್ಲದರ ಮೇಲೂ ಕ್ಯೂಆರ್ ಕೋಡ್ ಹಾಕಲಾಗಿದೆ. ಇಂಥದ್ದೊಂದು ವಿಶೇಷತೆಯ ಕುರಿತು ಟ್ವಿಟರ್ ಬಳಕೆದಾರ ದೀಪಕ್ ಗೋಪಾಲಕೃಷ್ಣನ್ ಪೋಸ್ಟ್ ಮಾಡಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ನೆಟ್ಟಿಗರು ಮನಸೋತರೂ, ಇಲ್ಲಿ ಕೂಡ ಒಂದು ರೂಪಾಯಿ ಶ್ಯಾಂಪೂಗೆ, ಎರಡು ರೂಪಾಯಿ ವಿಧಿಸಿರುವುದನ್ನು ಕಂಡು ಕಿಡಿ ಕಾರಿದ್ದಾರೆ. ಪೋಸ್ಟ್ 500 ಕ್ಕೂ ಹೆಚ್ಚು ಲೈಕ್ಗಳು ಮತ್ತು ಅನೇಕ ಕಾಮೆಂಟ್ ಬಂದಿವೆ. At an Airbnb in Bangalore and the host has kept purchasable items with QR codes for payments and this is the most @peakbengaluru moment that has ever happened to me 😂 pic.twitter.com/vlhyq8Vxr4 — Deepak Gopalakrishnan (@chuck_gopal) November 19, 2022 Why did you blue the code? You afraid someone's gonna buy them for you 😅 — . (@xvrhyu) November 19, 2022 Do folks pay? Thats the most important question here — Gangadhar (@gangadhargs) November 19, 2022 Which airbnb was this and how was your experience? — 23:23 ✨ (@ayushikul_02) November 19, 2022 I think it's a great idea and service. — Chin S. (@chin80) November 19, 2022 2 rupee for a 1rupee clinic plus. Why so — Aman Sagar (@amanzrx4) November 19, 2022