ಹುಲಿಗಳು ಎಂಬ ಶಬ್ದ ಕೇಳಿದರೆ ಭಯ ಬೀಳುತ್ತೇವೆ. ಆದರೆ ಅಭಯಾರಣ್ಯಗಳಲ್ಲಿ ಇವುಗಳನ್ನು ನೋಡುವುದು ಎಂದರೆ ಬಲು ಖುಷಿ. ಆದರೆ ಅಭಯಾರಣ್ಯಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗದು. ಅದೃಷ್ಟವಂತರಿಗೆ ಮಾತ್ರ ಇವುಗಳ ದರ್ಶನ ಸಾಧ್ಯ.
ಹಲವು ಹುಲಿಗಳು ರಸ್ತೆ ದಾಟುವ ಅಪರೂಪದ ವಿಡಿಯೋ ಒಂದು ವೈರಲ್ ಆಗಿದ್ದು, ಅದನ್ನು ನೋಡಿದವರು ರೋಮಾಂಚನಗೊಳ್ಳುವಂತಿದೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಹುಲಿಯು ಸಫಾರಿ ಮಾರ್ಗವನ್ನು ದಾಟುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹುಲಿ ತನ್ನ ಐದು ಮಕ್ಕಳೊಂದಿಗೆ ರಸ್ತೆ ದಾಟುವ ವಿಡಿಯೋ ಇದಾಗಿದೆ. ಐದು ಪುಟ್ಟ ಹುಲಿ ಮರಿಗಳು ತರಾತುರಿಯಲ್ಲಿ ತಮ್ಮ ತಾಯಿಯನ್ನು ಕಾಡಿಗೆ ಹಿಂಬಾಲಿಸಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
“ಕುಂತಿಯು ಪಂಚ ಪಾಂಡವರ ಜೊತೆ ದರ್ಶನ ಕೊಟ್ಟಳು” ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.