ಶಿವಮೊಗ್ಗ: ರಟ್ಟಿನ ಬಾಕ್ಸ್ ಸಾಗಿಸುತ್ತಿದ್ದ ಲಾರಿಯೊಂದರ ಚಕ್ರ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ಬೈಪಾಸ್ ರಸ್ತೆ ಊರುಗಡೂರು ಕ್ರಾಸ್ ಬಳಿ ನಡೆದಿದೆ.
ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿದ್ದ ರಟ್ಟಿನ ಬಾಕ್ಸ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಘಟನೆ ಸಂದರ್ಭ ಕ್ಯಾಂಟರ್ ಅಕ್ಕಪಕ್ಕದಲ್ಲಿ ಯಾವುದೇ ವಾಹನ ಇರಲಿಲ್ಲ. ಹಾಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.
ಕ್ರೇನ್ ಮೂಲಕ ಕ್ಯಾಂಟರ್ ವಾಹನವನ್ನು ತೆರವು ಮಾಡಲಾಯಿತು. ಅಪಘಾತದ ಹಿನ್ನೆಲೆ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.