ಲಾರಿ ಚಾಲಕನೊಬ್ಬ ಆನೆಗೆ ಕಬ್ಬು ಕೊಟ್ಟ ತಪ್ಪಿಗೆ ಬರೋಬ್ಬರಿ 75,000 ರೂಪಾಯಿ ದಂಡ ತೆತ್ತಿದ್ದಾನೆ. ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು, ಮೈಸೂರು ಜಿಲ್ಲೆ ನಂಜನಗೂಡು ಮೂಲದ ಸಿದ್ದರಾಜು ಎಂಬ ಚಾಲಕ ಅನಿವಾರ್ಯವಾಗಿ ದಂಡ ಪಾವತಿಸಿದ್ದಾರೆ.
ಇವರು ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ಕಬ್ಬಿನ ಜಲ್ಲೆಗಳನ್ನು ಆನೆಯತ್ತ ಎಸೆದಿದ್ದರು. ಇದು ಗಸ್ತಿನಲ್ಲಿ ನಿರತವಾಗಿದ್ದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಚಾಲಕ ಸಿದ್ದರಾಜು ಅವರನ್ನು ಲಾರಿ ಸಮೇತ ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ದಂಡ ಪಾವತಿಸುವವರೆಗೂ ಲಾರಿಯನ್ನು ಬಿಡುವುದಿಲ್ಲ ಎಂದು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಿದ್ದರಾಜು 75,000 ರೂಪಾಯಿ ಪಾವತಿಸಿದ್ದಾರೆ. ಈ ಹಿಂದೆ ಅರಣ್ಯದಲ್ಲಿ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಆನೆಗಳು ಅಡ್ಡಗಟ್ಟಿ ಕಬ್ಬು ಎಳೆದುಕೊಂಡ ವಿಡಿಯೋ ವೈರಲ್ ಆಗಿತ್ತು