ತಾಜ್ ಮಹಲ್ ಕುರಿತು ಇತಿಹಾಸದ ಪುಸ್ತಕಗಳಲ್ಲಿ ನೀಡಲಾಗಿರುವ ತಪ್ಪು ಮಾಹಿತಿಗಳನ್ನು ತೆಗೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರುಗಳಿದ್ದ ನ್ಯಾಯಪೀಠ, ನಾವು ಇತಿಹಾಸವನ್ನು ಕೆದಕಲು ಇಲ್ಲಿ ಕುಳಿತಿಲ್ಲ ಎಂದು ಹೇಳಿದ್ದಲ್ಲದೆ ಇತಿಹಾಸ ಇರುವಂತೆಯೇ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ ಈ ಕುರಿತಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಅರ್ಜಿದಾರರು ಮೊರೆ ಹೋಗಬಹುದು ಎಂದು ನ್ಯಾಯಪೀಠ ಹೇಳಿದ್ದು, ನೀವು ಸಲ್ಲಿಸಲಾಗಿರುವ ಅರ್ಜಿ ನ್ಯಾಯಾಲಯಕ್ಕೆ ಸಂಬಂಧವಿಲ್ಲದ್ದು. ಈ ಕುರಿತು ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ತಿಳಿಸಿದೆ.