ಕತಾರ್: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ನಲ್ಲಿ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಅರ್ಜೆಂಟೀನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಮೆಸ್ಸಿ ಆಕರ್ಷಕ ಹೊಡೆತದ ಮೂಲಕ ಚಂಡನ್ನು ಗೋಲಿನ ಬಲೆಯೊಳಗೆ ಬೀಳಿಸುವ ಮೂಲಕ ತಮ್ಮ ವೃತ್ತಿಪರ ಆಟ 1,000 ನೇ ಗೋಲು ದಾಖಲಿಸಿದರು.
ರೋಮಾಂಚನಾಕಾರಿ ಪಂದ್ಯ 34 ನೇ ನಿಮಿಷದಲ್ಲಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು ಮೆಸ್ಸಿ. ಆದರೆ ಅದೇ ಇನ್ನೊಂದೆಡೆ ಇವರ ಮಗನ ನಡವಳಿಕೆ ಮಾತ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಟೇಡಿಯಂನಲ್ಲಿ ಉಪಸ್ಥಿತನಿದ್ದ ಅವರ ಏಳು ವರ್ಷದ ಮಗ ಮಾಟಿಯೊ, ಚ್ಯೂಯಿಂಗ್ ಗಮ್ ತಿಂದು ಅದನ್ನು ಜನರತ್ತ ಎಸೆದಿದ್ದಾನೆ. ಈತನ ತಾಯಿ ಪಕ್ಕದಲ್ಲಿಯೇ ಇದ್ದರು. ಮಗನ ನಡವಳಿಕೆ ಕಂಡು ಅವರೂ ಮಗನನ್ನು ಬೈದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಅರ್ಜೆಂಟೀನಾ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಲಿಯೋನೆಲ್ ಮೆಸ್ಸಿಗಾಗಿ ಹುರಿದುಂಬಿಸುತ್ತಿದ್ದಾಗ, ಅವರ ಮಗ ತಿಂದ ಚೂಯಿಂಗ್ ಗಮ್ ಎಸೆಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಜನರು ಕೂಡ ಅಸಮಾಧಾನ ಹೊರಹಾಕುತ್ತಿದ್ದಾರೆ.
https://twitter.com/MessiMX30iiii/status/1599356558231490560?ref_src=twsrc%5Etfw%7Ctwcamp%5Etweetembed%7Ctwterm%5E1599356558231490560%7Ctwgr%5E0fc0c0db8a0647c7522fb2b9cddf77635415124e%7Ctwcon%5Es1_&ref_url=https%3A%2F%2Fwww.dnaindia.com%2Fsports%2Freport-lionel-messi-s-son-throws-chewing-gum-on-the-fans-during-argentina-australia-match-irks-antonela-roccuzzo-3008244