ಫ್ರೆಂಡ್ಶಿಪ್ ಅನ್ನೋ ಪದವೇ ಮನಸ್ಸಿಗೆ ಕಚಗುಳಿ ಕೊಡುವ ಪದ. ಕಷ್ಟ ಸುಖ ಏನೇ ಇರಲಿ ಗೆಳೆಯರು ಜೊತೆಗಿದ್ದರೆ ಮನಸ್ಸಿಗೆ ಅದೊಂಥರಾ ಸಮಾಧಾನ. ಎಲ್ಲರ ಬದುಕಿನಲ್ಲೂ ಸ್ನೇಹಕ್ಕೆ ಒಂದು ವಿಶೇಷ ಸ್ಥಾನ ಇದ್ದೇ ಇರುತ್ತೆ. ಹಾಗಂತ ಕೇವಲ ಮನುಷ್ಯರಲ್ಲಿ ಮಾತ್ರ ನಾವು ಸ್ನೇಹ ಪ್ರೀತಿಯ ಮಧುರ ಬಾಂಧವ್ಯವನ್ನು ನೋಡಬಹುದು ಅನ್ನೋ ಅರ್ಥ ಅಲ್ಲ.
ಸಕಲ ಜೀವರಾಶಿಯಲ್ಲೂ ಸ್ನೇಹದ ಸುಂದರ ಬಂಧವನ್ನ ನೋಡಬಹುದಾಗಿದೆ. ಪ್ರಾಣಿ-ಪಕ್ಷಿಗಳಲ್ಲೂ ಸುಂದರ ಸ್ನೇಹದ ಕೊಂಡಿಯನ್ನ ನೋಡಬಹುದು. ಮಾತಿಲ್ಲ ಕಥೆಗಳಿಲ್ಲ ಆ ಭಾವನೆ ತುಂಬಿದ ಸಂಬಂಧ ನೋಡೋದೇ ಒಂದು ಖುಷಿ, ಅಂಥಾ ವಿಡಿಯೋಗಳಲ್ಲಿ ಈ ವಿಡಿಯೋ ಕೂಡಾ ಒಂದು. ನೋಡಿದ್ರಾ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯಗೆದ್ದ ವಿಡಿಯೋ ಇದು. ಟೈಗರ್ ವಿಡಿಯೋಸ್ ಅನ್ನೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆಗಿರೋ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಪುಟ್ಟ ಹುಲಿ ಮರಿ ಹಾಗೂ ಕೋತಿ ಮರಿ ತುಂಟಾಟ ಆಡ್ತಿರೋ ವಿಡಿಯೋ ಇದು, ಹುಲಿ ಮತ್ತು ಕೋತಿ ಇವೆರಡು ಒಂದು ಕಡೆ ಇರೋದಕ್ಕೆ ಸಾಧ್ಯವೇ ಇಲ್ಲ. ಆದರೆ ಇಲ್ಲಿ ಪುಟ್ಟ ಹುಲಿ ಮರಿ ಮತ್ತು ಕೋತಿ ಮರಿ ಹೇಗೆ ಆಟ ಆಡ್ತಿವೆಯಂತ ಈ ವಿಡಿಯೋ ನೋಡೋದೇ ಒಂದು ಖುಷಿ. ಮಕ್ಕಳ ಮನಸ್ಸು ನಿಷ್ಕಲ್ಮಶ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ. ಎರಡು ದಿನದ ಹಿಂದಷ್ಟೆ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ ಈಗಾಗಲೇ 3,800ಕ್ಕೂ ಹೆಚ್ಚು ಲೈಕ್ ಬಂದಿದೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದೇ ಪಟ್ಟಿದ್ದು.