alex Certify ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ದರ್ಶನ್ ನಂದು ಪಾಲ್​ ಎಂಬ ವರ ತನ್ನ ಮದುವೆಯ ದಿನ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವರ, ತನ್ನ ಮುದ್ದಿನ ನಾಯಿ ಪೂಚ್‌ನೊಂದಿಗೆ ಬೈಕ್‌ನಲ್ಲಿ ತನ್ನ ಮದುವೆಯ ಸ್ಥಳಕ್ಕೆ ಪ್ರವೇಶ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಶೆರ್ವಾನಿ ಧರಿಸಿ ಮದುಮಗನ ಡ್ರೆಸ್​ನಲ್ಲಿರುವ ಯುವಕ ನಗುತ್ತಾ ತನ್ನ ಸಾಕು ನಾಯಿಯ ಜತೆ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಈ ವಿಡಿಯೋ ಅನ್ನು ಇದಾಗಲೇ 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ತಾವೂ ಹೀಗೆ ಭಿನ್ನವಾಗಿ ಏನಾದರೂ ಮಾಡುವ ಯೋಚನೆ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...