ಮಕ್ಕಳ ರಕ್ಷಣೆಯಲ್ಲಿ ತಂದೆ ಯಾವಾಗ್ಲೂ ಸೈನಿಕನಂತೆ ಇರ್ತಾರೆ. ಪ್ರತಿ ಹಂತದಲ್ಲೂ ಪ್ರತಿ ಕ್ಷಣದಲ್ಲೂ ತನ್ನ ಮಗುವಿನ ರಕ್ಷಣೆಗೆ ತಂದೆ ಟೊಂಕ ಕಟ್ಟಿ ನಿಂತಿರ್ತಾರೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ.
ಸ್ಕೂಟರ್ ಸವಾರನೊಬ್ಬ ತನ್ನ ಮಗುವನ್ನು ದ್ವಿಚಕ್ರ ವಾಹನದಿಂದ ಬೀಳದಂತೆ ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರ ವಾಹನವನ್ನು ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದು, ವೀಡಿಯೊದಲ್ಲಿ ಬಾಲಕ ತನ್ನ ತಲೆಯನ್ನು ವ್ಯಕ್ತಿಯ ಬೆನ್ನಿಗೆ ತಾಕಿಸಿ ಮಲಗಿದ್ದಾನೆ. ಒಂದು ಹಂತದ ಪ್ರಯಾಣದಲ್ಲಿ ಬಾಲಕನ ತಲೆ ಒಂದು ಸೈಡಿಗೆ ಬಾಗಿದ್ದು ಗಾಢ ನಿದ್ದೆಯಲ್ಲಿರುವಂತೆ ತೋರುತ್ತದೆ.
ಈ ವೇಳೆ ಹುಡುಗ ಸ್ಕೂಟರ್ನಿಂದ ಬೀಳದಂತೆ ತಡೆಯಲು ಸವಾರನು ತನ್ನ ಎಡಗೈಯನ್ನು ಬಾಲಕನ ಹಿಂದೆ ಇರಿಸಿ ರಕ್ಷಿಸಿದ್ದಾರೆ. ಮತ್ತು ತನ್ನ ಬಲಗೈಯಿಂದ ಮಾತ್ರ ಸ್ಕೂಟರ್ ಓಡಿಸಿದ್ದಾರೆ.
ಅಭಿಷೇಕ್ ಥಾಪಾ ಎಂಬ ಇನ್ ಸ್ಟಾಗ್ರಾಂ ಬಳಕೆದಾರರು ನವೆಂಬರ್ 14 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಮಕ್ಕಳ ರಕ್ಷಣೆಗೆ ನಿಲ್ಲುವ ತಂದೆಯನ್ನು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಹಾಡಿ ಹೊಗಳಿದ್ದಾರೆ.