alex Certify ‘ಇಲ್ಲಿ ಕ್ರಿಪ್ಟೋ ಸ್ವೀಕರಿಸಲಾಗುವುದು’: ಬೆಂಗಳೂರು ಚಹಾ ಮಾರಾಟಗಾರನ ಫಲಕ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇಲ್ಲಿ ಕ್ರಿಪ್ಟೋ ಸ್ವೀಕರಿಸಲಾಗುವುದು’: ಬೆಂಗಳೂರು ಚಹಾ ಮಾರಾಟಗಾರನ ಫಲಕ ವೈರಲ್​

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಆಗಾಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಕುತೂಹಲ ಎನಿಸುವ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರು ಶೇರ್​ ಮಾಡುವ ವಿಡಿಯೋ ಅಥವಾ ಪೋಸ್ಟ್​ಗಳು ಸಾಕಷ್ಟು ವೈರಲ್​ ಆಗುತ್ತವೆ.

ಇದೀಗ ಅಂಥದ್ದೇ ಒಂದು ಅವರ ಪೋಸ್ಟ್​ ವೈರಲ್​ ಆಗಿದೆ. ಅದರಲ್ಲಿ ಅವರು, ಕ್ರಿಪ್ಟೋ ಕರೆನ್ಸಿಯಲ್ಲಿ ಪಾವತಿಗಳನ್ನು ಸ್ವೀಕರಿಸುವ ಚಹಾ-ಮಾರಾಟಗಾರನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 1 ರಂದು ಹರ್ಷ್ ಗೋಯೆಂಕಾ ಟ್ವಿಟ್ಟರ್‌ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಬೆಂಗಳೂರಿನ ಚಹಾ ಮಾರಾಟಗಾರನದ್ದು. ಈತ ತನ್ನ ಸ್ಟಾಲ್‌ನಲ್ಲಿ ಚಹಾ ಮಾರುವ ಚಿತ್ರವನ್ನು ಹರ್ಷ್​ ಶೇರ್​ ಮಾಡಿಕೊಂಡಿದ್ದು, ಅಲ್ಲಿ ಇರುವ ಒಂದು ಬೋರ್ಡ್​ ಗಮನ ಸೆಳೆಯುತ್ತದೆ. ಅದೇನೆಂದರೆ ಇಲ್ಲಿ ಡಿಜಿಟಲ್ ಪಾವತಿ ಸ್ಕ್ಯಾನರ್ ಮತ್ತು ಕ್ರಿಪ್ಟೋ ಸ್ವೀಕರಿಸಲಾಗುವುದು ಎಂದು ಬರೆಯಲಾಗಿದೆ.

ಇದು ನವ ಭಾರತ ಎಂದು ತಮಾಷೆಯಾಗಿ ಹರ್ಷ್​ ಗೋಯೆಂಕಾ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಕಮೆಂಟಿಗರು ಥರಹೇವಾರಿ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...