ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸಂಪೂರ್ಣ ಹಣವನ್ನು ವಧುವಿನ ಪಾಲಕರಿಗೆ ವಾಪಸ್ ನೀಡಿರುವ ವರ, 1 ರೂಪಾಯಿಯನ್ನು ‘ಶಗುನ್’ ಎಂದು ತೆಗೆದುಕೊಂಡಿದ್ದಾನೆ. ಇಲ್ಲಿನ ತಿಟಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಲಖನ್ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿದ್ದು ಈ ವೇಳೆ ವರ ಈ ರೀತಿಯ ಮೆಚ್ಚುಗೆಯ ಕಾರ್ಯ ಮಾಡಿದ್ದಾನೆ.
ವರ ಸೌರಭ್ ಚೌಹಾಣ್ ಕಂದಾಯ ಅಧಿಕಾರಿ (ಲೇಖಪಾಲ್) ಮತ್ತು ವಧು ಪ್ರಿನ್ಸ್ ನಿವೃತ್ತ ಸೈನಿಕನ ಮಗಳು. ಚೌಹಾಣ್ ಅವರ ಈ ನಡೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೈರಲ್ ಸುದ್ದಿಗೆ ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದು, ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ.