ಈ ಬಾರಿಯ ವಿವೋ ಪ್ರೋ ಕಬ್ಬಡಿಯ ಕ್ವಾಲಿಫಿಯರ್ ಗಾಗಿ ಎಲ್ಲಾ ತಂಡಗಳು ಹೋರಾಟ ನಡೆಸುತ್ತಿದ್ದು, ಇಂದಿನ ಎರಡನೇ ಪಂದ್ಯವನ್ನು ವೀಕ್ಷಿಸಲು ಕಬಡ್ಡಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಯುಪಿ ಯೋಧಾಸ್ ನ ನಾಯಕ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಕಬ್ಬಡಿ ಅಂಕ ಪಟ್ಟಿಯಲ್ಲಿ ಯುಪಿ ಯೋಧಾಸ್ ಮೂರನೇ ಸ್ಥಾನದಲ್ಲಿದ್ದರೇ ಬೆಂಗಳೂರು ಬುಲ್ಸ್ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಜಯಭೇರಿ ಆದರೆ 3ನೇ ಸ್ಥಾನಕ್ಕೇರಲಿದೆ.
ಬೆಂಗಳೂರು ಬುಲ್ಸ್ ನ ಪ್ರಮುಖ ರೈಡರ್ ಭರತ್ ಹೂಡಾ ಹಾಗೂ ಡಿಫೆಂಡರ್ ಸೌರಭ್ ನಂದಾಲ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೂ ಮುನ್ನ ಮೊದಲನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್ ಜೆಂಟ್ಸ್ ಸೆಣಸಾಡಲಿವೆ.