ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್ ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. (ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು).
ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.
ನಿಂಬೆ ರಸ ಹಾಗೂ ಜೇನುತುಪ್ಪ :
ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ.
ಪುದೀನಾ :
ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದ್ರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.
ಸೌತೇಕಾಯಿ :
2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.